
ಪಿಟಿಐ
ಅಮರಾವತಿ: ಮ್ಯಾನ್ಮಾರ್‌ನಲ್ಲಿ ರಕ್ಷಿಸಿದ ಆಂಧ್ರಪ್ರದೇಶದ 55 ಮಂದಿಯನ್ನು ದೆಹಲಿಯ ಆಂಧ್ರಪ್ರದೇಶ ಭವನಕ್ಕೆ ಕರೆತರಲಾಗಿದೆ.
ಮ್ಯಾನ್ಮಾರ್‌ನಿಂದ ರಕ್ಷಿಸಿದ 370 ಮಂದಿಯನ್ನು ಹೊತ್ತ ಮೂರು ವಿಮಾನಗಳು ದೆಹಲಿಗೆ ಬಂದಿಳಿದಿವೆ. ಇದರಲ್ಲಿ 55 ಮಂದಿ ವಿಜಯವಾಡ ಮತ್ತು ವಿಶಾಖಪಟ್ಟಣಕ್ಕೆ ಸೇರಿದ್ದಾರೆ.
ಉದ್ಯೋಗಾವಕಾಶ ಕಲ್ಪಿಸುವುದಾಗಿ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಮ್‌ಗಳಲ್ಲಿ ಬಂದ ನಕಲಿ ಲಿಂಕ್‌ಗಳನ್ನು ನಂಬಿ ಇವರು ಮೋಸ ಹೋಗಿದ್ದರು. ಇದು ಅವರನ್ನು ಸೈಬರ್ ಅಪರಾಧ ಜಾಲದೊಳಗೆ ಸಿಲುಕಿಸುವಂತೆ ಮಾಡಿತ್ತು. ಇವರು ತಮ್ಮ ಬಳಿ ಇದ್ದ ಹಣ, ಮೊಬೈಲ್ ಫೋನ್‌ಗಳನ್ನು ಸಹ ಕಳೆದುಕೊಂಡಿದ್ದರಿಂದ ಕುಟುಂಬದೊಂದಿಗೆ ಸಂಪರ್ಕ ಕಡಿತಗೊಂಡಿತ್ತು. ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ನಡುವಿನ ಗಡಿ ಪಟ್ಟಣವಾದ ಮೈವಾಡಿಯಲ್ಲಿರುವ ಕೆ.ಕೆ. ಪಾರ್ಕ್ ಬಳಿ ರಕ್ಷಿಸಲಾಗಿದೆ ಎಂದು ಆಂಧ್ರಪ್ರದೇಶ ಭವನದ ವಿಶೇಷ ಆಯುಕ್ತ ಆರ್ಜಾ ಶ್ರೀಕಾಂತ್ ತಿಳಿಸಿದ್ದಾರೆ.