ADVERTISEMENT

ಮೈಸೂರು ಪೆಯಿಂಟ್ಸ್‌ನಿಂದ 26 ಲಕ್ಷ ಬಾಟಲಿ ಶಾಯಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 19:08 IST
Last Updated 24 ಮಾರ್ಚ್ 2019, 19:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಏಪ್ರಿಲ್ 11ರಿಂದ ಆರಂಭವಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡುವ ಸಲುವಾಗಿ 26 ಲಕ್ಷ ಬಾಟಲಿ (ಸಣ್ಣ ಸೀಸೆ) ಶಾಯಿ ಒದಗಿಸುವಂತೆ ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ.

ಅಳಿಸಲಾಗದ ಶಾಯಿ ಉತ್ಪಾದಿಸುವ ದೇಶದ ಅಧಿಕೃತ ಸಂಸ್ಥೆಕರ್ನಾಟಕ ಸರ್ಕಾರದ ಒಡೆತನದ ‘ಮೈಸೂರ್ ಪೆಯಿಂಟ್ಸ್‌ ಅಂಡ್ ವಾರ್ನಿಷ್ ಲಿಮಿಟೆಡ್’ ಸಂಸ್ಥೆ ಮಾತ್ರ.

‘ಶಾಯಿಗಳನ್ನು ಒದಗಿಸುವಂತೆ ಆಯೋಗ ಕೇಳಿದ್ದು, ಇದಕ್ಕೆ ₹33 ಕೋಟಿ ವೆಚ್ಚವಾಗಲಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ದೊಡ್ಡಮನಿ ತಿಳಿಸಿದ್ದಾರೆ.

ADVERTISEMENT

2014ರ ಚುನಾವಣೆಯಲ್ಲಿ 21.5 ಲಕ್ಷ ಬಾಟಲಿಗಳನ್ನು ಚುನಾವಣಾ ಆಯೋಗ ಬಳಸಿತ್ತು. ಈ ಬಾರಿ 4.5 ಲಕ್ಷ ಹೆಚ್ಚುವರಿ ಸೀಸೆ ಒದಗಿಸಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.