ADVERTISEMENT

ನಾಗಾಲ್ಯಾಂಡ್‌ನ ಸಮಸ್ಯೆ ಪರಿಹರಿಸಿ–ಕೇಂದ್ರಕ್ಕೆ ರಾಜ್ಯದ ಶಾಸಕರು, ಸಂಸದರ ಒತ್ತಾಯ

ಪಿಟಿಐ
Published 3 ಆಗಸ್ಟ್ 2021, 7:48 IST
Last Updated 3 ಆಗಸ್ಟ್ 2021, 7:48 IST

ಕೊಹಿಮಾ: ನಾಗಾಲ್ಯಾಂಡ್‌ನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ನಾಗಾಲ್ಯಾಂಡ್‌ನ ಶಾಸಕರು, ಸಂಸದರು ಸಭೆ ನಡೆಸಿದ್ದಾರೆ.

ನಾಗಾ ರಾಜಕೀಯ ಸಮಸ್ಯೆ ಪರಿಹರಿಸುವ ಕುರಿತ ರಚನೆಯಾಗಿರುವ ಸಂಸದೀಯ ಸಮಿತಿಯು ನಾಗಾಲ್ಯಾಂಡ್‌ ವಿಧಾನಸಭೆಯ ಎಲ್ಲ 60 ಸದಸ್ಯರು, ರಾಜ್ಯದ ಇಬ್ಬರು ಸಂಸದರನ್ನು ಒಳಗೊಂಡಿದೆ. ಮುಖ್ಯಮಂತ್ರಿ ಇದರ ಸಂಚಾಲಕರಾಗಿದ್ದು, ಉಪ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಸಹ ಸಂಯೋಜಕಾರಿದ್ದಾರೆ.

‘ನಾವು ಒಂದು ಪರಿಹಾರ ಮತ್ತು ಒಂದು ಒಪ್ಪಂದಕ್ಕಾಗಿ ನಾಗಾ ಸಂಧಾನಕಾರರನ್ನು ಒಟ್ಟುಗೂಡಿಸಲು ಬಯಸುತ್ತೇವೆ. ಅದರ ಜತೆಗೆ ಆರಂಭಿಕ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ’ ಎಂದು ನಾಗಾಲ್ಯಾಂಡ್‌ನ ಸಚಿವ ನೀಬಾ ಕ್ರೋನು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.