ADVERTISEMENT

ನಾಗ್ಪುರ ಹಿಂಸಾಚಾರ: ಗಲಭೆ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ಸಮಿತಿ ಭೇಟಿ

ಪಿಟಿಐ
Published 20 ಮಾರ್ಚ್ 2025, 16:00 IST
Last Updated 20 ಮಾರ್ಚ್ 2025, 16:00 IST
<div class="paragraphs"><p>ಕಾಂಗ್ರೆಸ್‌</p></div>

ಕಾಂಗ್ರೆಸ್‌

   

ಮುಂಬೈ: ನಾಗ್ಪುರದ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಮುಖ್ಯಸ್ಥ ಹರ್ಷವರ್ಧನ್‌ ಸಪ್ಕಲ್‌ ಪಕ್ಷದ ಸಮಿತಿಯನ್ನು ರಚಿಸಿದ್ದಾರೆ.

ಸಪ್ಕಲ್‌ ಅವರು ರಚಿಸಿರುವ ಸಮಿತಿಯಲ್ಲಿ ಗೋವಾದ ಎಐಸಿಸಿ ಉಸ್ತುವಾರಿ ಮಾಣಿಕ್ರಾವ್ ಠಾಕ್ರೆ, ಪಕ್ಷದ ನಾಯಕರಾದ ನಿತಿನ್ ರಾವತ್, ಯಶೋಮತಿ ಠಾಕೂರ್, ಹುಸೇನ್ ದಲ್ವಾಯಿ ಮತ್ತು ಸಾಜಿದ್ ಪಠಾಣ್ ಇದ್ದಾರೆ. ನಾಗ್ಪುರ ಜಿಲ್ಲಾ ಕಾಂಗ್ರೆಸ್‌ ಮುಖ್ಯಸ್ಥ ಮತ್ತು ಶಾಸಕ ವಿಕಾಸ್‌ ಠಾಕ್ರೆ ಸಮಿತಿಯ ಸಂಚಾಲಕರು, ಎಐಸಿಸಿ ಕಾರ್ಯದರ್ಶಿ ಪ್ರಫುಲ್‌ ಗುಡಾಡೆ ಪಾಟೀಲ್‌ ಸಮಿತಿಯ ಸಂಯೋಜಕರಾಗಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.

ADVERTISEMENT

ಸೋಮವಾರ ರಾತ್ರಿ ನಾಗ್ಪುರದಲ್ಲಿ ನಡೆದ ಹಿಂಸಾಚಾರ ಘಟನೆ ರಾಜ್ಯದ ವೈಭವಕ್ಕೆ ಕಪ್ಪು ಚುಕ್ಕೆಯಾಗಿದೆ. ಕೆಲವರು ರಾಜ್ಯದಲ್ಲಿ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸಿರುವುದು ಬಹಳ ದುರದೃಷ್ಟಕರ. ರಾಜ್ಯದಲ್ಲಿ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡಬೇಕಿದೆ. ಸಮಿತಿಯು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತನಾಡಲಿದೆ’ ಎಂದು ಕಾಂಗ್ರೆಸ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.