ADVERTISEMENT

ನರಸಿಂಹರಾವ್‌ ಜನ್ಮಶತಮಾನೋತ್ಸವ: ಭಾರತ ರತ್ನಕ್ಕೆ ಒತ್ತಾಯ

ಪಿಟಿಐ
Published 28 ಜೂನ್ 2020, 14:03 IST
Last Updated 28 ಜೂನ್ 2020, 14:03 IST
ಪಿ.ವಿ. ನರಸಿಂಹ ರಾವ್‌
ಪಿ.ವಿ. ನರಸಿಂಹ ರಾವ್‌   

ಹೈದರಾಬಾದ್‌: ‘ನರಸಿಂಹ ರಾವ್‌ ಅವರುತೆಲಂಗಾಣದ ಹೆಮ್ಮೆಯ ಮಗ.ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲೇಬೇಕು’ ಎಂದುಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ತಿಳಿಸಿದರು.

ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್‌ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ವರ್ಷ ಪೂರ್ತಿ ಜನ್ಮಶತಮಾನೋತ್ಸವ ಕಾರ್ಯಕ್ರಮಗಳು ರಾಜ್ಯದಲ್ಲಿ ಜರುಗಲಿವೆ. ‘ರಾಜ್ಯದ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನರಸಿಂಹರಾವ್‌ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲು ಒತ್ತಾಯಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ನರಸಿಂಹರಾವ್‌ ಅವರ ಕಾರ್ಯನಿರ್ವಹಣೆ ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರಂತೆಯೇ ಇತ್ತು’ ಎಂದು ಅವರು ಸ್ಮರಿಸಿದರು.

ನರಸಿಂಹರಾವ್‌ ಅವರ ದಿಟ್ಟ ಆರ್ಥಿಕ ಸುಧಾರಣೆಗಳನ್ನು ಒಳಗೊಂಡಂತೆ ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ಮುಖ್ಯಮಂತ್ರಿ ನೆನಪಿಸಿಕೊಂಡರು.

ನರಸಿಂಹರಾವ್ ಅವರ 99 ನೇ ಜನ್ಮದಿನದ ಸ್ಮರಣಾರ್ಥ ಅವರ ಸಮಾಧಿ ಸ್ಥಳವಾದ ಪಿ.ವಿ. ಜ್ಞಾನ ಭೂಮಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ರಾಜ್ಯ ಸಚಿವರು, ವಿರೋಧ ಪಕ್ಷದ ನಾಯಕರು ಮತ್ತು ನರಸಿಂಹ ರಾವ್‌ ಅವರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.