
ಪಿಟಿಐ
ನವದೆಹಲಿ: ‘ಕೃತಕ ಬುದ್ಧಿಮತ್ತೆಯಿಂದ(ಎ.ಐ) ಆಗುವ ಪರಿಣಾಮಗಳ ಬಗ್ಗೆ ಎಷ್ಟೇ ಹೇಳಿಕೊಂಡರೂ ಮಾನವನ ಬುದ್ಧಿಶಕ್ತಿಯನ್ನು ಅದು ಮೀರಲಾರದು’ ಎಂದು ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಬುಧವಾರ ಹೇಳಿದರು.
ದೆಹಲಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಲೀಡರ್ಸ್ ಟಾಕ್’ ಸಂವಾದದಲ್ಲಿ ಮಾತನಾಡಿದ ಅವರು,‘ಮಾನವನ ಬುದ್ಧಿಶಕ್ತಿಗಿಂತ ಮಿಗಿಲಾದುದು ಯಾವುದೂ ಇಲ್ಲ’ ಎಂದು ಪ್ರತಿಪಾದಿಸಿದರು.
‘ಪ್ರಸ್ತುತ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು ನಮಗೆ ವರವಾಗಿದೆಯೇ ಹೊರತು ಅದು ಬೆದರಿಕೆಯಲ್ಲ. ಕೌಶಲಗಳನ್ನು ಮತ್ತೆ ಸಾಣೆ ಹಿಡಿಯುವುದು ಹಾಗೂ ಕಲಿಯುವ ಸಾಮರ್ಥ್ಯ ವೃದ್ಧಿಸಿಕೊಳ್ಳುವುದಕ್ಕೆ ಯುವಕರು ಮಹತ್ವ ನೀಡಬೇಕು ಎಂಬುದಾಗಿ ನಾರಾಯಣಮೂರ್ತಿ ಹೇಳಿದರು’ ಎಂದು ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.