ADVERTISEMENT

ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ: ಜಾಮಿಯಾದ 2 ವಿದ್ಯಾರ್ಥಿಗಳು ವಶಕ್ಕೆ

ವಿಶ್ವವಿದ್ಯಾಲಯ ಸುತ್ತಮುತ್ತ ‍ಪೊಲೀಸ್‌ ಬಂದೋಬಸ್ತ್‌, ಜಲಫಿರಂಗಿ, ಅಶ್ರುವಾಯು ವಾಹನ ನಿಯೋಜನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2023, 10:12 IST
Last Updated 25 ಜನವರಿ 2023, 10:12 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ನಿರ್ಮಾಣ ಮಾಡಿರುವ ವಿವಾದಿತ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ತಯಾರಿ ಮಾಡಿದ ಆರೋಪದಲ್ಲಿ, ಇಲ್ಲಿನ ಪ್ರತಿಷ್ಠಿತ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.

ಇಬ್ಬರು ಕೂಡ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗೆ ಸೇರಿದವರು. ವಿವಿಯ ಸಮೂಹ ಮಾಧ್ಯಮ ವಿಭಾಗದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ವಿವಿಯ ಗೇಟ್‌ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಶ್ರುವಾಯು ಹಾಗೂ ಜಲಫಿರಂಗಿ ವಾಹನಗಳು ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ.

ADVERTISEMENT

ಇದೇ ವೇಳೆ ಕ್ಯಾಂಪಸ್‌ನಲ್ಲಿ ಅನಧಿಕೃತ ಜಮಾವಣೆ ನಿಷೇಧಿಸಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.

2002ರ ಗುಜರಾತ್‌ ಗಲಭೆ ಸಂಬಂಧ ನಿರ್ಮಾಣ ಮಾಡಿದ ಸಾಕ್ಷ್ಯಚಿತ್ರ ಇದಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.