ADVERTISEMENT

Sudarshan Setu | ಗುಜರಾತ್​ನಲ್ಲಿ ಸುದರ್ಶನ ಕೇಬಲ್ ಸೇತುವೆ ಉದ್ಘಾಟಿಸಿದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2024, 4:35 IST
Last Updated 25 ಫೆಬ್ರುವರಿ 2024, 4:35 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​ನಲ್ಲಿ ಸುದರ್ಶನ ಕೇಬಲ್ ಸೇತುವೆಯನ್ನು ಉದ್ಘಾಟಿಸಿದ್ದಾರೆ.</p></div>

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​ನಲ್ಲಿ ಸುದರ್ಶನ ಕೇಬಲ್ ಸೇತುವೆಯನ್ನು ಉದ್ಘಾಟಿಸಿದ್ದಾರೆ.

   

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಗುಜರಾತ್​ನಲ್ಲಿ ಸುದರ್ಶನ ಕೇಬಲ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಈ ವಿಡಿಯೊಗಳನ್ನು ಸುದ್ದಿಸಂಸ್ಥೆ ಎಎನ್‌ಐ ‘ಎಕ್ಸ್‌’ನಲ್ಲಿ ಹಂಚಿಕೊಂಡಿದೆ.

ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. 2.5 ಕಿ.ಮೀ ಉದ್ದದ ಸುದರ್ಶನ ಸೇತುವೆಯು ಭಾರತದ ಅತಿ ಉದ್ದದ ಕೇಬಲ್ ಸೇತುವೆಯಾಗಿದೆ. ₹979 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಇದನ್ನು ಓಖಾ-ಬೆಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ.

ADVERTISEMENT

ಸುದರ್ಶನ ಸೇತುವೆಯು ಓಖಾ ಮುಖ್ಯ ಭೂಭಾಗವನ್ನು ಬೆಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕ ಕಲ್ಪಿಸುತ್ತದೆ. ಗುಜರಾತ್‌ನಲ್ಲಿ ₹52 ಸಾವಿರ ಕೋಟಿ ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳನ್ನು ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಇಂದು ಸುದರ್ಶನ ಸೇತುವನ್ನು ಉದ್ಘಾಟಿಸಲು ಸಂತೋಷವಾಗಿದೆ. ಇದು ಬಂದರು ಮತ್ತು ಜನರನ್ನು ಸಂಪರ್ಕಿಸುವ ಸೇತುವೆಯಾಗಿದೆ. ಜತೆಗೆ ಅಭಿವೃದ್ಧಿ ಪರ ನಾವು ಹೊಂದಿರುವ ಬದ್ಧತೆಗೆ ಇದುವೇ ಸಾಕ್ಷಿ’ ಎಂದು ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಐದು ‘ಏಮ್ಸ್‌’ ಉದ್ಘಾಟನೆ

ರಾಜ್‌ಕೋಟ್‌: ಪ್ರಧಾನಿ ಅವರು ರಾಜ್‌ಕೋಟ್‌ನಲ್ಲಿ ಸ್ಥಾಪಿಸಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು (ಏಮ್ಸ್) ಭಾನುವಾರ ಉದ್ಘಾಟಿಸಿದರು.  ಬಠಿಂಡಾ (ಪಂಜಾಬ್) ರಾಯಬರೇಲಿ (ಉತ್ತರ ಪ್ರದೇಶ) ಕಲ್ಯಾಣಿ (ಪಶ್ಚಿಮ ಬಂಗಾಳ) ಮತ್ತು ಮಂಗಳಗಿರಿಯಲ್ಲಿ (ಆಂಧ್ರ ಪ್ರದೇಶ) ಸ್ಥಾಪಿಸಿರುವ ಇತರ ನಾಲ್ಕು ‘ಏಮ್ಸ್‌’ ಸಂಸ್ಥೆಗಳನ್ನು ವರ್ಚುವಲ್‌ ಆಗಿ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.