ADVERTISEMENT

ಪ್ರಧಾನಿ ನರೇಂದ್ರ ಮೋದಿ ‘ಸ್ವಯಂ ಸೇವಕ’: ಮೋಹನ್ ಭಾಗವತ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 19:55 IST
Last Updated 19 ನವೆಂಬರ್ 2022, 19:55 IST
   

ಜಬಲ್ಪುರ, ಮಧ್ಯಪ್ರದೇಶ:ಪ್ರಧಾನಿ ನರೇಂದ್ರ ಮೋದಿ ಅವರು ಸ್ವಯಂ ಸೇವಕರಾಗಿದ್ದು, ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಸ್ವತಂತ್ರವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ಸಂಘ ನಿಯಂತ್ರಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘ ಚಾಲಕ ಮೋಹನ್ ಭಾಗವತ್ ಶನಿವಾರ ಹೇಳಿದ್ದಾರೆ.

ಸ್ಥಳೀಯ ಸಮುದಾಯದ ಪ್ರಮುಖ ಸದಸ್ಯರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಸಂಘದ ಹೆಸರು ಬಂದಾಗ, ಜನರು ಮೋದಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರು ನಮ್ಮ`ಸ್ವಯಂ ಸೇವಕರು' ಎಂದು ಹೇಳಿದರು.

‘ಯಾರಾದರೂ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವಾಗ ಜನರು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಬಗ್ಗೆಯೂ ಯೋಚಿಸುತ್ತಾರೆ. ಆ ಸಂಘಟನೆಯಲ್ಲೂ ಸ್ವಯಂ ಸೇವಕರಿದ್ದಾರೆ ಮತ್ತು ಅವರ ಆಲೋಚನೆಯೂ ಇದೇ ರೀತಿ ಇರುತ್ತದೆ.ಸಂಘವು ತನ್ನದೇ ಆದ ಸ್ವತಂತ್ರ ಕೆಲಸವನ್ನು ಮಾಡುತ್ತಿದೆ’ ಎಂದರು.

ADVERTISEMENT

ಅಂತಹ ಸಂಘಟನೆಗಳು, ವ್ಯಕ್ತಿಗಳ ಮೇಲೆ ಆರ್‌ಎಸ್‌ಎಸ್‌ ನೇರ ನಿಯಂತ್ರಣ ಹೊಂದಿರುವುದಿಲ್ಲ ಅಥವಾ ರಿಮೋಟ್‌ ಕಂಟ್ರೋಲ್‌ ಆಗಿಯೂ ಇರುವುದಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.