ADVERTISEMENT

ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್‌, ಪ್ರಧಾನಿ ಮೋದಿ

ಪಿಟಿಐ
Published 30 ಜನವರಿ 2021, 6:34 IST
Last Updated 30 ಜನವರಿ 2021, 6:34 IST
 ಮಹಾತ್ಮ ಗಾಂಧೀಜಿ ಸಮಾಧಿಗೆ ಗೌರವ ಸಲ್ಲಿಸುತ್ತಿರುವ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಮಹಾತ್ಮ ಗಾಂಧೀಜಿ ಸಮಾಧಿಗೆ ಗೌರವ ಸಲ್ಲಿಸುತ್ತಿರುವ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಮಹಾತ್ಮ ಗಾಂಧೀಜಿಅವರ ಪುಣ್ಯ ತಿಥಿ ದಿನವಾದ ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಅರ್ಪಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಷ್ಟ್ರಪತಿ ಅವರು, ‘‌ದೇಶದ ಪರವಾಗಿ ರಾಷ್ಟ್ರಪಿತ
ಮಹಾತ್ಮ ಗಾಂಧೀಜಿಅವರಿಗೆ ಗೌರವವನ್ನು ಅರ್ಪಿಸುತ್ತಿದ್ದೇನೆ.ಅವರು ಹುತಾತ್ಮರಾದ ದಿನವನ್ನು ಸ್ಮರಿಸುತ್ತಿದ್ದೇವೆ. ನಾವು ಅವರ ಶಾಂತಿ, ಅಹಿಂಸೆ, ಸರಳತೆ, ಪರಿಶುದ್ಧತೆ ಮತ್ತು ನಮ್ರತೆಯ ತತ್ವಗಳಿಗೆ ಬದ್ಧರಾಗಿರಬೇಕು’ ಎಂದಿದ್ದಾರೆ.

ಮಹಾತ್ಮ ಗಾಂಧೀಜಿಅವರ ಆದರ್ಶಗಳು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತವೆ. ಈ ಹುತಾತ್ಮರ ದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿದ ವೀರ ವನಿತೆಯರು ಹಾಗೂ ಯೋಧರನ್ನು ನೆನಪಿಸಿಕೊಳ್ಳೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

1948ರ ಜನವರಿ 30ರಂದುಗಾಂಧೀಜಿ ಅವರನ್ನು ನಾಥೂರಾಮ ಗೋಡ್ಸೆ ಗುಂಡಿಕ್ಕಿ ಕೊಂದಿದ್ದರು. ದೇಶದೆಲ್ಲೆಡೆ ಗಾಂಧಿಜೀ ಅವರ ಪುಣ್ಯ ತಿಥಿಯ ದಿನವನ್ನು ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.