ADVERTISEMENT

ಮೋದಿಗೆ ದೇಶದ ಪರಂಪರೆ ಬಗ್ಗೆ ಹೆಮ್ಮೆಯಿದೆ, ನೆಹರೂವಿನಂತಲ್ಲ: ಯೋಗಿ ಆದಿತ್ಯನಾಥ್‌

ಪಿಟಿಐ
Published 10 ಸೆಪ್ಟೆಂಬರ್ 2022, 3:02 IST
Last Updated 10 ಸೆಪ್ಟೆಂಬರ್ 2022, 3:02 IST
ರುದ್ರಕೇಶ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆಯೋಜಿಸಿದ್ದ ಮೋದಿ@20 ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ | ಪಿಟಿಐ ಚಿತ್ರ
ರುದ್ರಕೇಶ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆಯೋಜಿಸಿದ್ದ ಮೋದಿ@20 ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ | ಪಿಟಿಐ ಚಿತ್ರ   

ವಾರಾಣಸಿ: ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮೋದಿಗೆ ತನ್ನ ದೇಶದ ಪರಂಪರೆಯ ಬಗ್ಗೆ ಹೆಮ್ಮೆಯಿದೆ, ನೆಹರೂಗೆ ಇರಲಿಲ್ಲ ಎಂದಿದ್ದಾರೆ.

ದೇಶದ ಪರಪಂರೆ ಬಗ್ಗೆ ಹೆಮ್ಮೆಯನ್ನು ಹೊಂದಿರದ ಒಬ್ಬರು ಪ್ರಧಾನಿ ಇದ್ದರು. ಈಗ ದೇಶದ ಪರಂಪರೆ ಬಗ್ಗೆ ಹೆಮ್ಮೆಯ ಭಾವವನ್ನು ಹೊಂದಿರುವುದಷ್ಟೇ ಅಲ್ಲ, ಭಾರತವನ್ನು 'ಏಕ ಭಾರತ, ಶ್ರೇಷ್ಠ ಭಾರತ'ವನ್ನಾಗಿಸಲು ಪಣತೊಟ್ಟಿರುವ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಎಂದು ಆದಿತ್ಯನಾಥ್‌ ಹೇಳಿದ್ದಾರೆ.

ರುದ್ರಕೇಶ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆಯೋಜಿಸಿದ್ದ ಮೋದಿ@20 ಹೆಸರಿನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್‌ ಮಾತನಾಡಿದರು.

ADVERTISEMENT

ಕಾಶ್ಮೀರದಲ್ಲಿ ಉಗ್ರರ ಬೇರನ್ನು ಶಾಶ್ವತವಾಗಿ ತೆಗೆದುಹಾಕಲು ಹಿಂದೆೇಟು ಹಾಕದೆ, ಭಯೋತ್ಪಾದನೆಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಪ್ರಧಾನಿ ಮೋದಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇದು ಪ್ರಧಾನಿ ಮೋದಿ ಅವರ ನಾಯಕತ್ವದ ಸಾಮರ್ಥ್ಯ ಎಂದು ಯೋಗಿ ಆದಿತ್ಯನಾಥ್‌ ಶ್ಲಾಘಿಸಿದರು.

ಸೋಮನಾಥ ದೇಗುಲದ ಮರುಸ್ಥಾಪನೆಗೆ ರಾಷ್ಟ್ರಪತಿಯನ್ನು ಕಳುಹಿಸಲು ವಿರೋಧಿಸಿದ ಪ್ರಧಾನಿಯನ್ನು ಕಂಡಿದ್ದೇವೆ. ಆದರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ಸ್ವತಃ ಕೈಗೊಂಡಂತಹ ಪ್ರಧಾನಿಯು ನಮ್ಮ ಜೊತೆಗಿದ್ದಾರೆ. ವಿಶ್ವದಲ್ಲೇ ಅತಿಹೆಚ್ಚು ಖ್ಯಾತಿ ಹೊಂದಿರುವ ನಾಯಕ ಪ್ರಧಾನಿ ಮೋದಿ ಎಂಬುದಕ್ಕೆ ನಮಗೆಲ್ಲರಿಗೂ ಹೆಮ್ಮೆಯಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.