ADVERTISEMENT

ದೇಶದಾದ್ಯಂತ ಈದ್ ಮಿಲಾದ್ ಸಂಭ್ರಮ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ಏಜೆನ್ಸೀಸ್
Published 10 ನವೆಂಬರ್ 2019, 5:06 IST
Last Updated 10 ನವೆಂಬರ್ 2019, 5:06 IST
ಈದ್ ಮಿಲಾದ್ ಹಬ್ಬದ ಆಚರಣೆಗಾಗಿ ಸಾಂಪ್ರದಾಯಕ ಹಾಗೂ ಬಗೆಬಗೆಯ ಬಣ್ಣದ ದ್ವಜಗಳನ್ನು ದಾವಣಗೆರೆಯ ಭಾಷಾನಗರ ಮುಖ್ಯ ರಸ್ತೆಯಲ್ಲಿ ಮಾರಾಟ ಮಾಡುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಈದ್ ಮಿಲಾದ್ ಹಬ್ಬದ ಆಚರಣೆಗಾಗಿ ಸಾಂಪ್ರದಾಯಕ ಹಾಗೂ ಬಗೆಬಗೆಯ ಬಣ್ಣದ ದ್ವಜಗಳನ್ನು ದಾವಣಗೆರೆಯ ಭಾಷಾನಗರ ಮುಖ್ಯ ರಸ್ತೆಯಲ್ಲಿ ಮಾರಾಟ ಮಾಡುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ನವದೆಹಲಿ:ದೇಶದಾದ್ಯಂತ ಇಂದು ಮುಸ್ಲಿಮರುಈದ್ ಮಿಲಾದ್ ಹಬ್ಬ ಆಚರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ.

‘ಈದ್ ಹಬ್ಬದ ಶುಭಾಶಯಗಳು. ಪ್ರವಾದಿ ಮುಹಮ್ಮದರಿಂದ ಪ್ರಭಾವಿತರಾಗಿದ್ದೇನೆ. ಈ ದಿನ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಾನುಭೂತಿಯ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ. ಎಲ್ಲೆಡೆ ಶಾಂತಿ ನೆಲೆಸಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಈದ್ ಮಿಲಾದ್ ಹಬ್ಬದ ಶುಭಾಶಯಗಳು’ ಎಂದು ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಪ್ರವಾದಿ ಮುಹಮ್ಮದರ ಜನ್ಮದಿನದ ಹಬ್ಬಈದ್ ಮಿಲಾದ್ ಸಂದರ್ಭದಲ್ಲಿ ಎಲ್ಲ ದೇಶವಾಸಿಗಳಿಗೆ, ವಿಶೇಷವಾಗಿ ದೇಶ ವಿದೇಶಗಳಲ್ಲಿ ನೆಲೆಸಿರುವ ಮುಸ್ಲಿಮ್ ಸಹೋದರ–ಸಹೋದರಿಯರಿಗೆ ಶುಭಾಶಯಗಳು. ಪ್ರವಾದಿ ಮುಹಮ್ಮದರ ಸಾರ್ವತ್ರಿಕಸಹೋದರತ್ವ ಮತ್ತು ಸಹಾನುಭೂತಿಯ ಸಂದೇಶವು ಎಲ್ಲರಿಗಾಗಿ ಕೆಲಸ ಮಾಡಲು ನಮಗೆ ಪ್ರೇರಣೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.