ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಒಂದೂ ಪ್ರಶ್ನೆಗೆ ಉತ್ತರಿಸದ ಮೋದಿ: ಟ್ವಿಟರ್‌ನಲ್ಲಿ ಟ್ರೋಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯಿಂದಲೂ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2019, 14:20 IST
Last Updated 17 ಮೇ 2019, 14:20 IST
   

ಬೆಂಗಳೂರು:ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿರುವ ನರೇಂದ್ರ ಮೋದಿ ಇದೀಗ ಟ್ವಿಟರ್‌ನಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಪ್ರಶ್ನೆಗಳಿಗೆ ಉತ್ತರಿಸದೆಮೋದಿ ಪತ್ರಿಕಾಗೋಷ್ಠಿ ಮುಗಿಸಿದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕರು ವ್ಯಂಗ್ಯವಾಡಿದ್ದಾರೆ.

‘ಅಭಿನಂದನೆಗಳು ಮೋದಿಜೀ. ಅತ್ಯುತ್ತಮ ಪತ್ರಿಕಾಗೋಷ್ಠಿ! ಪತ್ರಿಕಾಗೋಷ್ಠಿ ಎದುರಿಸಿದ್ದು ಉತ್ತಮ ಪ್ರಯತ್ನ. ಮುಂದಿನ ಬಾರಿಯಾದರೂ ಅಮಿತ್ ಶಾ ಅವರು ನಿಮಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡಬಬಹುದು. ವೆಲ್‌ ಡನ್!’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ಇದು ಯಾರ ಪತ್ರಿಕಾಗೋಷ್ಠಿ? ಪ್ರಧಾನಿ ಯಾರು? ಅಮಿತ್ ಶಾ ಅವರಾ ಅಥವಾ ನರೇಂದ್ರ ಮೋದಿ ಅವರಾ! ವ್ಯರ್ಥ ಪತ್ರಿಕಾಗೋಷ್ಠಿ’ ಎಂದು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ.

‘ಬ್ರೇಕಿಂಗ್ ನ್ಯೂಸ್.

ಸಿದ್ಧಪಡಿಸಿಟ್ಟ ಪ್ರಶ್ನೆ/ಉತ್ತರದ ಪ್ರತಿಗಳನ್ನು ಯಾರೋ ಜಾಗ ಬದಲಿಸಿಟ್ಟಿದ್ದರಿಂದ ಪ್ರಧಾನಿಯವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿಲ್ಲ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ’ ಎಂದು ‘ದಿ ದೇಶ ಭಕ್ತ್’ ಎಂಬ ಹೆಸರಿನ ಟ್ವಿಟರ್‌ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ.

‘ಮನ್‌ ಕಿ ಬಾತ್ ಮತ್ತು‍ಪತ್ರಿಕಾಗೋಷ್ಠಿ ನಡುವಣ ವ್ಯತ್ಯಾಸದ ಬಗ್ಗೆ ಮೋದಿಜೀ ಅವರಿಗೆ ಗೊಂದಲ ಉಂಟಾಗಿದೆ’ ಎಂದು ಪ್ರತೀಕ್ ಸಿನ್ಹಾ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಪತ್ರಿಕಾಗೋಷ್ಠಿಯ ಇತಿಹಾಸದಲ್ಲಿ ಇದೊಂದು ಅತ್ಯುತ್ತಮ ಪತ್ರಿಕಾಗೋಷ್ಠಿ’ ಎಂದು ವಕೀಲ್ ವಂದುಮುರುಗನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಮೋದಿ ಅವರು ಕೇವಲ ಸ್ಟ್ರೆಸ್‌ ಕಾನ್ಫರೆನ್ಸ್‌ ನಡೆಸಿದರು’ ಎಂದು ಮೈತಲಿ ಸರಣ್ ಎಂಬುವವರು ವ್ಯಂಗ್ಯವಾಡಿದ್ದಾರೆ.

‘ಮೋದಿ ಮತ್ತು ಅಮಿತ್ ಶಾ ಅವರು ಈಗ ಮಾಡಿರುವುದನ್ನು ಪತ್ರಿಕಾಗೋಷ್ಠಿ ಎಂದು ಕರೆಯುವುದು ಅರ್ನಬ್ ಗೋಸ್ವಾಮಿ ಅವರನ್ನು ಪತ್ರಕರ್ತ ಎಂದು ಕರೆದಂತೆ’ ಎಂದು ಕುನಲ್ ಕಮ್ರಾ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಪತ್ರಿಕಾಗೋಷ್ಠಿಗಾಗಿ ಥ್ಯಾಂಕ್ಯೂ ಮನ್‌ಮೋದಿ ಜೀ’ ಎಂದು ಯೂತ್ ಅಗೈನ್ಸ್ಟ್ ಹೇಟ್ ಎಂಬ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ.

‘ಅವರು ಒಂದು ಪ್ರಶ್ನೆಗೆ ಉತ್ತರಿಸಿದ್ದಾರೆ. ನೀವದನ್ನು ನೋಡಿಲ್ಲ. ದಯಮಾಡಿ ನೋಡಿ’ ಎಂದು ವಿಡಿಯೊ ತುಣುಕೊಂಡನ್ನು ಹಂಚಿಕೊಂಡಿದ್ದಾರೆ ರಿಷಿಕೇಶ್ ಯಾದವ್ ಎಂಬುವವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.