ADVERTISEMENT

ಕಾಶ್ಮೀರಲ್ಲಿ ಅಭಿವೃದ್ಧಿಯಾಗಬೇಕಿದೆ, ದ್ವೇಷದಿಂದ ಏನೂ ಸಾಧಿಸಲಾಗುವುದಿಲ್ಲ: ಮೋದಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 10:24 IST
Last Updated 28 ಜುಲೈ 2019, 10:24 IST
   

ನವದೆಹಲಿ: ಕಾಶ್ಮೀರದ ಜನರು ಅಭಿವೃದ್ಧಿ ಬಯಸುತ್ತಾರೆಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ದ್ವೇಷ ಹರಡುವುದರಿಂದ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡುವುದರಿಂದ ಏನೂ ಸಾಧಿಸಲು ಆಗುವುದಿಲ್ಲ ಎಂದಿದ್ದಾರೆ.

ಭಾನುವಾರ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಜೂನ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮರಳಿ ಗ್ರಾಮಕ್ಕೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶೋಪಿಯಾನ್, ಪುಲ್ವಾಮ , ಕುಲ್ಗಾಂ ಮತ್ತು ಅನಂತನಾಗ್‌ನಲ್ಲಿರುವ ಗ್ರಾಮಗಳಿಗೆ ಸರ್ಕಾರಿ ಅಧಿಕಾರಿಗಳು ತೆರಳಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಲ್ಲಿ ಚರ್ಚಿಸಿದ್ದರು.ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು.

ಕಾಶ್ಮೀರದ ಜನರು ಅಭಿವೃದ್ಧಿಯ ಮುಖ್ಯವಾಹಿನಿಗೆ ಬರಲು ಉತ್ಸುಕರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.ಈ ರೀತಿಯ ಕಾರ್ಯಕ್ರಮಗಳು ಮತ್ತು ಅದರಲ್ಲಿ ಜನರ ಭಾಗವಹಿಸುವುದನ್ನು ನೋಡಿದರೆ ಕಾಶ್ಮೀರದ ಜನರು ಉತ್ತಮ ಸರ್ಕಾರವನ್ನು ಬಯಸುತ್ತಿದ್ದಾರೆ ಎಂಬುದು ತೋರಿಸುತ್ತದೆ.ಅಭಿವೃದ್ದಿಯ ಶಕ್ತಿಯು ಬುಲೆಟ್ ಮತ್ತು ಬಾಂಬ್‌ಗಳಿಂದಲೂ ಹೆಚ್ಚು ಪ್ರಭಾವಶಾಲಿ.

ADVERTISEMENT

ದ್ವೇಷ ಹರಡುವ ಮತ್ತು ಅಭಿವೃದ್ದಿಗೆ ತೊಡಕುಂಟು ಮಾಡುವವರು ಯಾವತ್ತೂ ಅದರಲ್ಲಿ ಗೆಲುವು ಸಾಧಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಕಾಶ್ಮೀರದ ಆತಿಥ್ಯವನ್ನು ಹೊಗಳಿದ ಮೋದಿ ಜುಲೈ 1 ರಿಂದ ಇಲ್ಲಿಯವರೆಗೆ 3 ಲಕ್ಷ ತೀರ್ಥ ಯಾತ್ರಿಕರು ಅಮರನಾಥ ಯಾತ್ರೆಯನ್ನು ಪೂರೈಸಿದ್ದು, ಈ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ ಎಂದು ಹಾರೈಸಿದ್ದಾರೆ.

ಚಂದ್ರಯಾನ- 2 ಯಶಸ್ವಿಯಾಗಿ ಉಡ್ಡಯನ ಮಾಡಿದ ಇಸ್ರೊಗೆ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದು, ಈ ಕಾರ್ಯಕ್ರಮದಿಂದ ದೇಶದ ಯುವ ಜನತೆ ವಿಜ್ಞಾನ ಮತ್ತು ಸಂಶೋಧನೆ ಬಗ್ಗೆ ಸ್ಫೂರ್ತಿ ಪಡೆಯಲು ಸಾಧ್ಯವಾಗಲಿದೆ ಎಂದಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಪ್ರವಾಹವಾಗಿದ್ದು, ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಸರ್ಕಾರವೂ ಸಹಾಯ ಹಸ್ತ ನೀಡುತ್ತಿದೆ ಎಂದಿದ್ದಾರೆ ಮೋದಿ.

ತಮ್ಮದೇ ಆದ ಜಲ ನೀತಿಯನ್ನು ರಚಿಸಿದಮೇಘಾಲಯ ಸರ್ಕಾರವನ್ನು ಶ್ಲಾಘಿಸಿದ ಮೋದಿ, ನಾನು ಮೇಘಾಲಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ.ಕಡಿಮೆ ಪ್ರಮಾಣದ ನೀರು ಸಾಕಾಗುವ ಬೆಳೆಗಳನ್ನು ಹರ್ಯಾಣದಲ್ಲಿ ಬೆಳೆಸಬೇಕು.ಇದರಿಂದ ರೈತರಿಗುಂಟಾಗುವ ನಷ್ಟವನ್ನು ತಡೆಯಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.