ADVERTISEMENT

ಭಾರತ-ಚೀನಾ ಗಡಿಯಲ್ಲಿ ಭಾರತದ ನಾರಿ ಶಕ್ತಿ! ಕಾವಲಿಗೆ ಐಟಿಬಿಪಿ ಮಹಿಳಾ ಯೋಧರು ತಯಾರು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 3:56 IST
Last Updated 28 ಡಿಸೆಂಬರ್ 2025, 3:56 IST
<div class="paragraphs"><p>ಐಟಿಬಿಪಿಯ ಮಹಿಳಾ ಯೋಧರು</p></div>

ಐಟಿಬಿಪಿಯ ಮಹಿಳಾ ಯೋಧರು

   

ಬೆಂಗಳೂರು: ಭಾರತ-ಚೀನಾ ಗಡಿಯಲ್ಲಿ (ಎಲ್‌ಎಸಿ) ಇದೇ ಮೊದಲ ಬಾರಿಗೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಮಹಿಳಾ ಸಿಬ್ಬಂದಿಯನ್ನು ಮುಂಚೂಣಿ ಕಾವಲಿಗೆ ನಿಯೋಜಿಸುವ ಕಾರ್ಯಕ್ಕೆ ಚಾಲನೆ ದೊರಕಿದೆ.

ಐಟಿಬಿಪಿ ಇತ್ತೀಚೆಗೆ ಈ ಹೊಸ ನಿರ್ಧಾರ ಕೈಗೊಂಡಿದೆ ಎಂದು ನ್ಯೂಸ್ 18 ವರದಿ ಮಾಡಿದೆ.

ADVERTISEMENT

ಐಟಿಬಿಪಿಯ 10 ಮಹಿಳಾ ಬೆಟಾಲಿಯನ್‌ನಲ್ಲಿನ ಸುಮಾರು 4 ಸಾವಿರ ಕಾನ್‌ಸ್ಟೆಬಲ್ ಹಾಗೂ ಅಧಿಕಾರಿ ಶ್ರೇಣಿಯ ಮಹಿಳಾ ಸಿಬ್ಬಂದಿಯನ್ನು ಗಡಿ ಕಾವಲಿಗೆ ನಿಯೋಜಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಸಿಬ್ಬಂದಿ ಐಟಿಬಿಪಿಯ ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಲಡಾಕ್ ಉದ್ದಕ್ಕೂ ಚೀನಾ ಗಡಿಯ 32 ಗಡಿ ಪೋಸ್ಟ್‌ಗಳಲ್ಲಿ ಕಾವಲು ಕೆಲಸವನ್ನು ಪುರುಷ ಸಿಬ್ಬಂದಿಗೆ ಸಮಾನವಾಗಿ ನಿರ್ವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ಗಡಿ ಪೋಸ್ಟ್‌ಗಳಲ್ಲಿ ಮಹಿಳಾ ಸಿಬ್ಬಂದಿಗೆ ಅತ್ಯಾಧುನಿಕವಾದ ಟೆಂಟ್ ವ್ಯವಸ್ಥೆಗಳು ಇರಲಿವೆ. ಅವರ ಕೆಲಸ, ಆರೋಗ್ಯ ಗಮನದಲ್ಲಿಟ್ಟುಕೊಂಡು ಅನೂಕೂಲಗಳನ್ನು ಕಲ್ಪಿಸಿಕೊಡಲಾಗುತ್ತದೆ. ಒಂದು ಗಡಿ ಪೋಸ್ಟ್‌ನಲ್ಲಿ ನಿರ್ಮಾಣವಾಗುವ ಶೆಲ್ಟರ್‌ನಲ್ಲಿ ಮೂವತ್ತು ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಪ್ರತಿ ಒಂದರಲ್ಲಿ ಮೂವರು ಸಿಬ್ಬಂದಿ ಇರಲಿದ್ದಾರೆ. ಅಧಿಕಾರಿಗಳಿಗೆ ಪ್ರತ್ಯೇಕ ಮನೆ ಇರಲಿದೆ ಎಂದು ಐಟಿಬಿಪಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2016 ರಿಂದ ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳಿಂದ ಐಟಿಬಿಪಿಯಲ್ಲಿ ಮಹಿಳಾ ಯೋಧರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.