ADVERTISEMENT

ಕೋವಿಡ್ ನೇಸಲ್ ಲಸಿಕೆಗೆ ಖಾಸಗಿಯವರಿಗೆ ₹800, ಸರ್ಕಾರಕ್ಕೆ ₹350 ಬೆಲೆ ನಿಗದಿ

ಪಿಟಿಐ
Published 27 ಡಿಸೆಂಬರ್ 2022, 8:53 IST
Last Updated 27 ಡಿಸೆಂಬರ್ 2022, 8:53 IST
   

ನವದೆಹಲಿ: ಇತ್ತೀಚೆಗೆ ಅನುಮೋದನೆ ಪಡೆದ ಕೋವಿಡ್ ನೇಸಲ್ ಲಸಿಕೆ ಇನ್‌ಕೊವ್ಯಾಕ್‌ಗೆ ಖಾಸಗಿ ಸರಬರಾಜಿಗೆ ₹800 ಮತ್ತು ಸರ್ಕಾರಕ್ಕೆ ಸರಬರಾಜು ಮಾಡುವ ಬೆಲೆ ₹350 ಅನ್ನು ಭಾರತ್ ಬಯೊಟೆಕ್ ಸಂಸ್ಥೆ ನಿಗದಿಪಡಿಸಿದೆ.

ಈ ಲಸಿಕೆ ಸದ್ಯ ಕೋವಿನ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಜಿಎಸ್‌ಟಿ ಮತ್ತು ಆಸ್ಪತ್ರೆಯ ಶುಲ್ಕಗಳು ಪ್ರತ್ಯೇಕವಾಗಿರಲಿವೆ.

ADVERTISEMENT

ಭಾರತ್ ಬಯೊಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಬೂಸ್ಟರ್ ಡೋಸ್‌ ಆಗಿ ಬಳಕೆ ಮಾಡಲು ಡಿ.23ರಂದು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.

ಕೋವಿಡ್‌ ನಿಯಂತ್ರಣಕ್ಕಾಗಿ ಮೂಗಿನ ಮೂಲಕ ಬಳಸಬಹುದಾದ ದೇಶದ ಮೊದಲ ಕೋವಿಡ್ ಲಸಿಕೆ ಇದಾಗಿದೆ.

2021ರ ಆಗಸ್ಟ್‌ನಲ್ಲಿ ನೇಸಲ್‌ ಲಸಿಕೆಯ 2 ಮತ್ತು 3ನೇ ಕ್ಲಿನಿಕಲ್ ಪ್ರಯೋಗ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.