ADVERTISEMENT

ಫಾರೂಕ್ ಅಬ್ದುಲ್ಲಾಗೆ ಗೃಹಬಂಧನ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 12:26 IST
Last Updated 14 ಡಿಸೆಂಬರ್ 2019, 12:26 IST
   

ಜಮ್ಮು ಕಾಶ್ಮೀರ:ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರುಕ್ ಅಬ್ದುಲ್ಲಾ ಅವರ ಗೃಹ ಬಂಧನವನ್ನು ಮತ್ತೆ ಮೂರು ತಿಂಗಳು ಮುಂದುವರಿಸಲಾಗಿದೆ.

ಆಗಸ್ಟ್ 5 ರಂದು ಫಾರುಕ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿರಿಸಿ ಆದೇಶಿಸಲಾಗಿತ್ತು. ಅವರ ಮನೆಯನ್ನೇ ಸಬ್ ಜೈಲಾಗಿ ಪರಿವರ್ತಿಸಿ ಅವರನ್ನು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ತಡೆ ಹಿಡಿಯಲಾಗಿದೆ. ಸಾರ್ವಜನಿಕ ರಕ್ಷಣಾ ಕಾಯ್ದೆಯ ಅನ್ವಯ ಇವರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಇದೇ ತಿಂಗಳ ಆರಂಭದಲ್ಲಿ ಫಾರೂಕ್ ಅಬ್ದುಲ್ಲಾ ಪತ್ರ ಬರೆದು ನನ್ನಂತಹಿರಿಯ ಸಂಸತ್ ಸದಸ್ಯನನ್ನು ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳದಂತೆ ಈ ರೀತಿ ಬಂಧನದಲ್ಲಿರಿಸುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದ್ದರು. ಈ ಪತ್ರವನ್ನು ಶಶಿತರೂರ್ ಬಹಿರಂಗಪಡಿಸಿದ್ದರು.

ಇಲ್ಲಿ ಪತ್ರಗಳೂ ನನಗೆ ಸರಿಯಾಗಿ ತಲುಪುತ್ತಿಲ್ಲ. ಆ ಸ್ಥಿತಿಯಲ್ಲಿ ನಾನಿದ್ದೇನೆ ಇದು ದುರದೃಷ್ಟಕರ, ಒಬ್ಬ ಹಿರಿಯ ಸಂಸದನಾಗಿರುವ ನನ್ನನ್ನು ಕೇಂದ್ರ ಸರ್ಕಾರ ಈ ರೀತಿ ನಡೆಸಿಕೊಳ್ಳುವುದು ಸರಿಯಾದ ಕ್ರಮವಲ್ಲಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.