ADVERTISEMENT

ಜಿಇಎಂ ವೇದಿಕೆ ಮೂಲಕ 6 ಕೋಟಿ ಮೌಲ್ಯದ ಧ್ವಜ ಸಂಗ್ರಹ

ಪಿಟಿಐ
Published 16 ಆಗಸ್ಟ್ 2022, 14:19 IST
Last Updated 16 ಆಗಸ್ಟ್ 2022, 14:19 IST
   

ನವದೆಹಲಿ : ಸುಮಾರು ₹6 ಕೋಟಿ ಮೌಲ್ಯದ 2.36 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ಸರ್ಕಾರದ ವಿವಿಧ ಇಲಾಖೆಗಳು ಮತ್ತು ರಾಜ್ಯಗಳು ಸಾರ್ವಜನಿಕ ಖರೀದಿಪೋರ್ಟಲ್‌ ಆದ ‘ಗವರ್ನಮೆಂಟ್‌ ಇ–ಮಾರ್ಕೆಟ್‌ಪ್ಲೇಸ್‌’ನಿಂದ (ಜಿಇಎಂ) ಸಂಗ್ರಹಿಸಿವೆ ಎಂಬುದು ಅಧಿಕೃತ ಅಂಕಿಅಂಶವೊಂದರಿಂದ ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಹರ್‌ ಘರ್‌ ತಿರಂಗ’ ಅಭಿಯಾನದ ಕಾರಣ ಇಷ್ಟು ದೊಡ್ಡ ಪ್ರಮಾಣದಲ್ಲಿ ತ್ರಿವರ್ಣ ಧ್ವಜಗಳನ್ನು ಸಂಗ್ರಹಿಸಲಾಗಿತ್ತು. ಅಭಿಯಾನದ ಕಾರಣ ಹಿಂದೆಂದೂ ಕಂಡಿರದಷ್ಟು ದೊಡ್ಡ ಪ್ರಮಾಣದಲ್ಲಿ ಧ್ವಜಗಳಿಗಾಗಿ ಬೇಡಿಕೆ ಉಂಟಾಗಿತ್ತು. ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಧ್ಜಜ ಮಾರಾಟಗಾರರನ್ನು ತ್ವರಿತಗತಿಯಲ್ಲಿ ಜಿಇಎಂ ವೇದಿಕೆಗೆ ಕೊರೆದುಕೊಂಡು ಬೇಡಿಕೆಯನ್ನು ಪೂರೈಸಲಾಯಿತು. ಜಿಇಎಂನ ತಂಡವು ಧ್ವಜ ಕೊಳ್ಳುವ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳ ಜೊತೆ ಸಂವಹನ ನಡೆಸುತ್ತ ಧ್ವಜ ಸಂಗ್ರಹ ಕೆಲಸವು ಯಾವುದೇ ಅಡ್ಡಿ ಇಲ್ಲದೆ ನಡೆಯುವಂತೆ ಮಾಡಿತು’ ಎಂದು ಜಿಇಎಂ ಸಿಇಒ ಪಿ.ಕೆ. ಸಿಂಗ್‌ ಹೇಳಿದ್ದಾರೆ.

ಸುಮಾರು 4,149 ಮಾರಾಟಗಾರರು ಜಿಇಎಂ ವೇದಿಕೆಯಲ್ಲಿ ಧ್ವಜಗಳನ್ನು ಪೂರೈಸುವ ಸಲುವಾಗಿ ನೋಂದಣಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ADVERTISEMENT

ಸರ್ಕಾರಿ ಖರೀದಿದಾರರಿಗೆ ಪಾರದರ್ಶಕ ಮತ್ತು ಮುಕ್ತ ವೇದಿಕೆಯನ್ನು ನಿರ್ಮಿಸುವ ಸಲುವಾಗಿವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು 2016ರ ಆಗಸ್ಟ್‌ 9ರಂದುಜಿಇಎಂಗೆ ಚಾಲನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.