ನವದೆಹಲಿ: ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‌ನ (ಎನ್‌ಎಂಸಿಜಿ) ಕಾರ್ಯಕಾರಿ ಸಮಿತಿಯು ₹1,145 ಕೋಟಿ ವೆಚ್ಚದ14 ಯೋಜನೆಗಳಿಗೆ ಅನುಮೋದನೆ ನೀಡಿದೆ.
ಮಿಷನ್‌ನ ಮಹಾ ನಿರ್ದೇಶಕ ಜಿ.ಅಶೋಕ್ ಕುಮಾರ್ ನೇತೃತ್ವದಲ್ಲಿ ನಡೆದ 45ನೇ ಕಾರ್ಯಕಾರಿ ಸಮಿತಿಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಎನ್‌ಎಂಸಿಜಿ ಶನಿವಾರ ತಿಳಿಸಿದೆ.
14 ಯೋಜನೆಗಳಲ್ಲಿ ಒಳಚರಂಡಿ ನಿರ್ವಹಣೆ, ಕೈಗಾರಿಕೆಗಳಿಂದ ಬರುವ ಮಾಲಿನ್ಯದ ನಿಗ್ರಹ ಮತ್ತು ಜೀವವೈವಿಧ್ಯ ಸಂರಕ್ಷಣೆ ಮುಂತಾದವು ಸೇರಿವೆ.ಗಂಗಾ ತೀರದ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ ಮತ್ತು ಪಶ್ಚಿಮ ಬಂಗಾಳದಲ್ಲಿ ಒಳಚರಂಡಿ ನಿರ್ವಹಣೆ ಸಂಬಂಧಿತ 8 ಯೋಜನೆಗಳಿಗೆ ಅನುಮತಿಸಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.