ADVERTISEMENT

ಫೆ.19ರಂದು ರಾಷ್ಟ್ರೀಯ ಬುಡಕಟ್ಟು ದಿನಾಚರಣೆ?

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 13:52 IST
Last Updated 19 ಸೆಪ್ಟೆಂಬರ್ 2019, 13:52 IST

ನವದೆಹಲಿ: ರಾಷ್ಟ್ರ ನಿರ್ಮಾಣಕ್ಕೆ ಬುಡಕಟ್ಟು ಸಮುದಾಯದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಫೆಬ್ರುವರಿ 19ನ್ನು ‘ರಾಷ್ಟ್ರೀಯ ಬುಡಕಟ್ಟು ದಿನ’ವಾಗಿ ಆಚರಿಸಲು ಪರಿಶಿಷ್ಟ ಪಂಗಡದ ರಾಷ್ಟ್ರೀಯ ಸಮಿತಿಯು(ಎನ್‌ಸಿಎಸ್‌ಟಿ) ಶಿಫಾರಸು ಮಾಡಿದೆ.

ಸೆಪ್ಟೆಂಬರ್‌ 11ರಂದು ನಡೆದಿದ್ದ ಸಭೆಯಲ್ಲಿ ರಾಷ್ಟ್ರೀಯ ಬುಡಕಟ್ಟು ದಿನಾಚರಣೆ ಆಚರಿಸುವ ಕುರಿತು ಸಮಿತಿಯು ಚರ್ಚೆ ನಡೆಸಿತ್ತು. ‘ಇದೀಗ ಶಿಫಾರಸುಗಳನ್ನು ಸಂಬಂಧಿಸಿದ ಸಚಿವಾಲಯಕ್ಕೆ ಕಳುಹಿಸಲಾಗಿದೆ’ ಎಂದು ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದರು. ಬುಡಕಟ್ಟು ದಿನಾಚರಣೆಯಿಂದಾಗಿ ಬುಡಕಟ್ಟು ಜನರ ಸಮಸ್ಯೆಗಳು ಮುನ್ನಲೆಗೆ ಬರಲಿದ್ದು, ಇದರ ಪರಿಹಾರಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದರತ್ತ ಗಮನಹರಿಸಲು ಸಹಾಯವಾಗಲಿದೆ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ದಿನದಂದು ಬುಡಕಟ್ಟು ಸಮುದಾಯದ ಕಲಾವಿದರು ತಯಾರಿಸಿದ ಕಲಾಚಿತ್ರ, ಕೈಮಗ್ಗ, ಕಲಾಕೃತಿ, ಔಷಧ, ಹಾಗೂ ಬುಡಕಟ್ಟು ಸಮುದಾಯದ ಜನರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವ ಶಿಫಾರಸುಗಳನ್ನು ಸಮಿತಿ ನೀಡಿದೆ. ‘ಎನ್‌ಸಿಎಸ್‌ಟಿ ಸಲ್ಲಿಸಿದ ಶಿಫಾರಸುಗಳನ್ನು ಆಧರಿಸಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಗೃಹ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.