ADVERTISEMENT

ಪ್ರಾರಂಭವಾದ 19 ದಿನಗಳಲ್ಲೆ 1 ಲಕ್ಷ ಪ್ರಯಾಣಿಕರ ಸಂಖ್ಯೆ ದಾಟಿದ ಎನ್‌ಎಂಐಎ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2026, 11:17 IST
Last Updated 21 ಜನವರಿ 2026, 11:17 IST
   

ಬೆಂಗಳೂರು: ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (NMIA) ವಾಣಿಜ್ಯ ಕಾರ್ಯಾಚರಣೆ ಪ್ರಾರಂಭವಾದ ಮೊದಲ 19 ದಿನಗಳಲ್ಲೇ ಒಂದು ಲಕ್ಷ ಪ್ರಯಾಣಿಕರ ಸಂಖ್ಯೆಯನ್ನು ದಾಟುವ ಮೂಲಕ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.

2026ರ ಜನವರಿ 12ರ ಹೊತ್ತಿಗೆ, ಎನ್‌ಎಂಐಎ ಒಟ್ಟು 1,09,917 ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಇದರಲ್ಲಿ 55,934 ಪ್ರಯಾಣಿಕರ ಆಗಮನ ಮತ್ತು 53,983 ಪ್ರಯಾಣಿಕರು ನಿರ್ಗಮನ ಸೇರಿದೆ. ಇಲ್ಲಿ ಜನವರಿ 10ರಂದು ಅತೀ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅಂದು ಒಂದೇ ದಿನ 7,345 ಪ್ರಯಾಣಿಕರು ಇಲ್ಲಿಂದ ಸಂಚರಿಸಿದ್ದಾರೆ.

ADVERTISEMENT

ಸರಕು ಸಾಗಣೆಯ ವಿಷಯದಲ್ಲಿ, ಎನ್‌ಎಂಐಎ 22.21 ಟನ್ ಸರಕನ್ನು ನಿರ್ವಹಿಸಿದೆ. ಇದು ಪ್ರಾರಂಭದಿಂದಲೇ ಪ್ರಯಾಣಿಕ ಮತ್ತು ಸರಕು ಕಾರ್ಯಾಚರಣೆಗಳ ಕಡೆಗೆ ವಿಮಾನ ನಿಲ್ದಾಣ ಹೆಚ್ಚು ಒತ್ತು ನೀಡಿದೆ ಎಂಬುದನ್ನು ಸೂಚಿಸುತ್ತದೆ. ಸಂಪರ್ಕದ ವಿಷಯದಲ್ಲಿ, ದೆಹಲಿ, ಗೋವಾ ಮತ್ತು ಬೆಂಗಳೂರು ಪ್ರಮುಖ ವಲಯಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.