ADVERTISEMENT

ನೌಕಾಪಡೆಯ ಬಲ ಹೆಚ್ಚಿಸಬೇಕಿದೆ: ನೌಕಾಪಡೆಯ ಮುಖ್ಯಸ್ಥ ಕರಂಬೀರ್ ಸಿಂಗ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 18:58 IST
Last Updated 3 ಡಿಸೆಂಬರ್ 2020, 18:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ದೇಶದ ನೌಕಾಪಡೆಯ ಬಲವನ್ನು ಹೆಚ್ಚಿಸಲು ಮೂರನೇ ಯುದ್ಧವಿಮಾನವಾಹಕ ನೌಕೆಯ ಅನಿವಾರ್ಯ ಇದೆ. ದೇಶದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ (ಸುಮಾರು ₹370 ಲಕ್ಷ ಕೋಟಿ) ಹೆಚ್ಚಿಸುವ ದಿಸೆಯಲ್ಲಿ ಇದು ನೆರವಾಗಲಿದೆ’ ಎಂದು ನೌಕಾಪಡೆಯ ಮುಖ್ಯಸ್ಥ ಕರಂಬೀರ್ ಸಿಂಗ್ ಅವರು ಹೇಳಿದ್ದಾರೆ.

ಡಿಸೆಂಬರ್ 4ರಂದು ನೌಕಪಡೆ ದಿನವನ್ನು ಆಚರಿಸಲಾಗುತ್ತದೆ. ಈ ಸಂಬಂಧ ಮಾಧ್ಯಮಗೋಷ್ಠಿ ನಡೆಸಿ, ಮಾಹಿತಿ ಹಂಚಿಕೊಳ್ಳುವಾಗ ಅವರು ಈ ಮಾತು ಹೇಳಿದ್ದಾರೆ. ಮೂರನೇ ಯುದ್ಧ ವಿಮಾನವಾಹಕ ನೌಕೆಯ ಅಗತ್ಯದ ಬಗ್ಗೆ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ಅಗತ್ಯವಿರುವ ತಾಂತ್ರಿಕ ವಿವರಗಳನ್ನು ಕಲೆಹಾಕಲಾಗುತ್ತಿದೆ. ಆನಂತರವೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವ ಏರುತ್ತಿದೆ. ಈ ಭಾಗದಲ್ಲಿ ಚೀನಾದ ನೌಕಾಪಡೆಯ ಪ್ರಾಬಲ್ಯ ಹೆಚ್ಚುತ್ತಿದೆ. ಈ ಅಪಾಯವನ್ನು ಎದುರಿಸಲು ಭಾರತದ ನೌಕಾಪಡೆಗೆ ಮೂರು ಯುದ್ಧ ವಿಮಾನವಾಹಕ ನೌಕೆಗಳ ಅವಶ್ಯಕತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ನೌಕಾಪಡೆಯಲ್ಲಿ ಈಗ ಒಂದು ಯುದ್ಧ ವಿಮಾನವಾಹಕ ನೌಕೆ ಮಾತ್ರ ಇದೆ. 2020ರ ವೇಳೆಗೆ ಇನ್ನೊಂದು ಯುದ್ಧ ವಿಮಾನವಾಹಕ ನೌಕೆಯು ನೌಕಾಪಡೆಗೆ ಸೇರ್ಪಡೆಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.