ADVERTISEMENT

ಯುದ್ಧನೌಕೆಯಿಂದ ಉಡಾಯಿಸಬಲ್ಲ ಮಧ್ಯಮ ಶ್ರೇಣಿಯ ಕ್ಷಿಪಣಿ ಪರೀಕ್ಷೆ ಯಶಸ್ವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮಾರ್ಚ್ 2023, 8:19 IST
Last Updated 7 ಮಾರ್ಚ್ 2023, 8:19 IST
   

ನವದೆಹಲಿ: ಯುದ್ಧನೌಕೆಯಿಂದ ವಾಯು ಪ್ರದೇಶಕ್ಕೆ ಗುರಿಯಿಟ್ಟು ಉಡಾಯಿಸಬಹುದಾದ ಮಧ್ಯಮ ಶ್ರೇಣಿಯ ಕ್ಷಿಪಣಿ (MRSAM –Medium Range Surface to Air Missile) ಯನ್ನು ಭಾರತದ ವಾಯುಪಡೆಯು ಸೋಮವಾರ ಪರೀಕ್ಷಾರ್ಥ ಪ್ರಯೋಗವನ್ನು ಮಂಗಳವಾರ ಯಶಸ್ವಿಯಾಗಿ ನಡೆಸಿತು.

ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆ ‘ಐಎನ್‌ಎಸ್‌ ವಿಶಾಖಪಟ್ಟಣ’ ಮೂಲಕ ಈ ಕ್ಷಿಪಣಿಯನ್ನು ಉಡಾಯಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಆ್ಯಂಟಿ–ಶಿಪ್‌ ಮಿಸೈಲ್‌’ಗಳನ್ನು ಎದುರಿಸಬಲ್ಲ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆಯೇ ಎಂಬುದನ್ನು ಮೌಲ್ಯೀಕರಿಸುವುದಕ್ಕಾಗಿ ಇಂದಿನ ಪರೀಕ್ಷೆ ನಡೆಸಯಲಾಯಿತು ಎಂದು ನೌಕಾಪಡೆ ಹೇಳಿದೆ.

ADVERTISEMENT

ಡಿಆರ್‌ಡಿಒ ಮತ್ತು ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರೀಸ್‌ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಎಂಆರ್‌ಎಸ್‌ಎಎಮ್‌ ಅನ್ನು ಸರ್ಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ನಲ್ಲಿ ಉತ್ಪಾದಿಸುತ್ತಿದೆ.

ಆತ್ಮನಿರ್ಭರ ಭಾರತ ಮಾಡುವ ನಿಟ್ಟಿನಲ್ಲಿ ನಮಗೆ ಇರುವ ಬದ್ಧತೆಯನ್ನು ಇದು ಸಾಬೀತು ಮಾಡಿದೆ ಎಂದು ನೌಕಾಪಡೆ ಹೇಳಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.