ADVERTISEMENT

ಜಾರ್ಖಂಡ್‌: ನಕ್ಸಲರ ಜತೆ ಗುಂಡಿನ ಚಕಮಕಿ; ಇಬ್ಬರು ಭದ್ರತಾ ಸಿಬ್ಬಂದಿ ಸಾವು 

ಪಿಟಿಐ
Published 4 ಸೆಪ್ಟೆಂಬರ್ 2025, 15:26 IST
Last Updated 4 ಸೆಪ್ಟೆಂಬರ್ 2025, 15:26 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ರಾಂಚಿ: ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದು, ಒಬ್ಬರು ಗಾಯ‌ಗೊಂಡಿದ್ದಾರೆ.

ADVERTISEMENT

ಸಿಪಿಐ-ಮಾವೋವಾದಿಯಿಂದ‌ ಬೇರ್ಪಟ್ಟಿರುವ ನಿಷೇಧಿತ ತೃತೀಯ ಸಮ್ಮೇಳನ್‌ ಪ್ರಸ್ತುತಿ ಸಮಿತಿಯ (ಟಿಎಸ್‌‍ಪಿಸಿ) ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಕೆದಾಲ್‌ ಎಂಬ ಗ್ರಾಮದಲ್ಲಿ ರಾತ್ರಿ 12.30ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿತ್ತು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

ಮೃತ ಸಿಬ್ಬಂದಿಯನ್ನು ಕಾನ್‌ಸ್ಟೆಬಲ್‌ಗಳಾದ ಸಂತಾನ್‌ ಮೆಹ್ತಾ, ಸುನಿಲ್‌ ರಾಮ್‌ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಲಮು ಡಿಐಜಿ ನೌಶದ್‌ ಆಲಂ ಹೇಳಿದ್ದಾರೆ. 

ಟಿಎಸ್‌ಪಿಸಿ ಸಂಘಟನೆಯ ಕಮಾಂಡರ್‌ ಶಶಿಕಾಂತ್‌ ‌ಗಂಜು ಹಾಗೂ ಆತನ ಸಹಚರರು ಕೆದಾಲ್‌ ಗ್ರಾಮದಲ್ಲಿ ಅಡಗಿದ್ದಾರೆಂಬ ಮಾಹಿತಿಯ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.

ಈ ವೇಳೆ ಭದ್ರತಾ ಸಿಬ್ಬಂದಿ ಮೇಲೆ ಗುಂಡುಹಾರಿಸಿ ನಕ್ಸಲರು ಪರಾರಿಯಾಗಿದ್ದಾರೆ, ಶೋಧ ಮುಂದುವರಿಯುತ್ತಿದೆ ಎಂದು ಎಸ್‌ಪಿ ರೀಶ್ಮಾ ರಮೇಶನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.