ನವದೆಹಲಿ: ಬಿಹಾರದಲ್ಲಿ ಬುಧವಾರ ಮೂವರನ್ನು ಬಂಧಿಸಿರುವ ಮಾದಕ ವಸ್ತು ನಿಯಂತ್ರಣ ಸಂಸ್ಥೆಯು (ಎನ್‌ಸಿಬಿ) ಅವರಿಂದ 370 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿದೆ.
ಭಾಗಲ್ಪುರ್ ಜಿಲ್ಲೆಯಲ್ಲಿ ಮಂಗಳವಾರತೆಂಗಿನಕಾಯಿ ಸಾಗಿಸುತ್ತಿದ್ದ ಟ್ರಕ್‌ನಿಂದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ತೆಂಗಿನಕಾಯಿಯ ಕೆಳಗೆ ಗಾಂಜಾವನ್ನು ಮುಚ್ಚಿಡಲಾಗಿತ್ತು ಎಂದು ಎನ್‌ಸಿಬಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತನಾಗಿರುವ ಮಧುಬಾನಿಯ ನಿವಾಸಿ ಜಿ.ಕೆ ಶಾ ಎಂಬಾತ ಉತ್ತರ ಬಿಹಾರದ ಪ್ರಮುಖ ಅಕ್ರಮ ಗಾಂಜಾ ಮಾರಾಟಗಾರ. ಆಂಧ್ರಪ್ರದೇಶ ಮತ್ತು ಒಡಿಶಾ ಗಡಿ ಪ್ರದೇಶಗಳಲ್ಲಿ ಅಕ್ರಮವಾಗಿ ಬೆಳೆಯಲಾಗುವ ಗಾಂಜಾವನ್ನು ಟ್ರಕ್ ಮೂಲಕ ವಿಶಾಖಪಟ್ಟಣದಿಂದ ಮಧುಬಾನಿಗೆ ಸಾಗಿಸಲಾಗುತ್ತಿತ್ತು ಎಂದು ಎನ್‌ಸಿಬಿ ಉಪ ನಿರ್ದೇಶಕ ಕೆ.ಪಿ ಎಸ್ ಮಲ್ಹೋತ್ರಾ ಅವರು ಮಾಹಿತಿ ನೀಡಿದರು.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು ಬೆಳೆಯಲಾಗುತ್ತಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.