
ನವದೆಹಲಿ: ದೇಶದಲ್ಲಿನ ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಕೈ ಜೋಡಿಸುವುದಕ್ಕಾಗಿ ಎನ್‌ಸಿಸಿಯ (ನ್ಯಾಷನಲ್ ಕೆಡೆಟ್ ಕಾಪ್ಸ್) 1 ಲಕ್ಷ ಕೆಡೆಟ್‌ಗಳನ್ನು ಸಿದ್ದಗೊಳಿಸಲಾಗುತ್ತಿದೆ.
ಈ ಮಾಹಿತಿಯನ್ನು ದೆಹಲಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಎನ್‌ಸಿಸಿಯ ಮಹಾ ನಿರ್ದೇಶಕ ಲೆಫ್ಟಿನಂಟ್ ಜನರಲ್ ವೀರೆಂದ್ರ ವತ್ಸಾ ಅವರು ತಿಳಿಸಿದರು.
ದೇಶದ ಐದು ಕಡೆಗೆ ಶಿಬಿರಗಳನ್ನು ಆಯೋಜಿಸಿ 1 ಲಕ್ಷ ಕೆಡೆಟ್‌ಗಳನ್ನು ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿನ ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.
ಇದರ ಜೊತೆ 10 ಸಾವಿರ ಕೆಡೆಟ್‌ಗಳನ್ನು ಸೈಬರ್ ವಾರಿಯರ್‌ಗಳೆಂದು ಗುರುತಿಸಿ ಸೈಬರ್ ಅಪರಾಧ ಸಂಬಂಧಿತ ಕೆಲಸಗಳಿಗೆ ಸೇನೆ ಹಾಗೂ ಪೊಲೀಸ್‌ರಿಗೆ ಅನುಕೂಲ ಕಲ್ಪಿಸಲು ತಯಾರು ಮಾಡಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಸೈಬರ್ ಅಪರಾಧಗಳು ವ್ಯಾಪಕವಾಗುತ್ತಿವೆ. ಈ ನಿಟ್ಟಿನಲ್ಲಿ ಎಲ್ಲ ಕೆಡೆಟ್‌ಗಳಿಗೆ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಜಾಗೃತಿಯಲ್ಲಿ ಉತ್ತಮ ತಿಳಿವಳಿಕೆ ಹೊಂದಿರುವವರನ್ನು ಸೈಬರ್ ವಾರಿಯರ್‌ಗಳನ್ನಾಗಿ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು.
ಈ ಸಾರಿ 809 ಹೆಣ್ಣು ಮಕ್ಕಳು ಸೇರಿ 2406 ಎನ್‌ಸಿಸಿ ಕೆಡೆಟ್‌ಗಳು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.