ನವದೆಹಲಿ: ಭಾರತದ ಸ್ವದೇಶಿ ಚಳವಳಿಯನ್ನು ವಿವರಿಸುವ ಎರಡು ಹೊಸ ಪಠ್ಯಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಪರಿಚಯಿಸಿದೆ. 1905ರಿಂದ ಆರಂಭಗೊಂಡು ಪ್ರಧಾನಿ ನರೇಂದ್ರ ಮೋದಿ ಅವರು ‘ಆತ್ಮನಿರ್ಭರ ಭಾರತ’ ಆಗುವ ಬಗ್ಗೆ ಕರೆ ನೀಡಿದವರೆಗಿನ ಮಾಹಿತಿಗಳನ್ನು ಪಠ್ಯಗಳಲ್ಲಿ ಅಳವಡಿಸಲಾಗಿದೆ.
6ರಿಂದ 8ನೇ ತರಗತಿವರೆಗೆ ‘ಸ್ವದೇಶಿ’: ವೋಕಲ್ ಫಾರ್ ಲೋಕಲ್’ ಮತ್ತು 9ರಿಂದ 12ನೇ ತರಗತಿವರೆಗೆ ‘ಸ್ವದೇಶಿ: ಆತ್ಮನಿರ್ಭರ ಭಾರತಕ್ಕಾಗಿ’ ಎಂಬ ಹೆಸರಿನ ಪಠ್ಯಗಳನ್ನು ಸೇರಿಸಲಾಗಿದೆ. ‘ಆತ್ಮನಿರ್ಭರ ಭಾರತಕ್ಕಾಗಿ’ ಪಠ್ಯದಲ್ಲಿ ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ‘ವಿಕಸಿಕ ಭಾರತ’ದ ಪರಿಕಲ್ಪನೆ ಕುರಿತು ಮಾಡಿದ ಭಾಷಣದ ಆಯ್ದ ಭಾಗಗಳನ್ನು ಸೇರಿಸಲಾಗಿದೆ.
ರಾಷ್ಟ್ರೀಯ ಪುರಸ್ಕಾರ ಪಡೆದ ಶಿಕ್ಷಕರೊಂದಿಗೆ ಪ್ರಧಾನಿ ಮೋದಿ ಅವರು ಕಳೆದ ತಿಂಗಳು ಮಾತುಕತೆ ನಡೆಸಿದ್ದರು. ಈ ವೇಳೆ, ‘ಮಕ್ಕಳಿಗೆ ನೀವು ಹೋಂವರ್ಕ್ ನೀಡುತ್ತೀರಿ. ಇದರಲ್ಲಿ ಸಣ್ಣ ಬದಲಾವಣೆ ಮಾಡೋಣ. ನಾನು ನಿಮಗೆ ಹೋಂವರ್ಕ್ ನೀಡುತ್ತೇನೆ. ಸ್ವದೇಶಿ ವಸ್ತುಗಳ ಬಗ್ಗೆ ಮಕ್ಕಳೊಂದಿಗೆ ಸೇರಿಕೊಂಡು ಪ್ರಚಾರ ಅಭಿಯಾನ ನಡೆಸಿ’ ಎಂದಿದ್ದರು. ಈಗ ಎನ್‌ಸಿಇಆರ್‌ಟಿ ಈ ಹೊಸ ಪಠ್ಯಗಳನ್ನು ಪರಿಚಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.