ಪುಣೆ: ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಸಂಬಂಧ ಎನ್‌ಸಿಪಿ ಶಾಸಕರ ಸಹೋದರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ದೌಂಡ್ ತಾಲೂಕಿನ ಜಾನಪದ ಕಲಾ ಕೇಂದ್ರದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಗುಂಡು ಹಾರಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೋಮವಾರ ಸಂಜೆ ನಂತರ ಘಟನೆ ನಡೆದಿದ್ದು, ನೃತ್ಯ ನಡೆಯುತ್ತಿರುವಾಗ ಗುಂಡು ಹಾರಿಸಿದ ವ್ಯಕ್ತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣದ ದಾಖಲಿಸಲಾಗಿತ್ತು.
ಕೈಲಾಸ್ ಅಲಿಯಾಸ್ ಬಾಲಾಸಾಹೇಬ್ ಮಾಂಡೆಕರ್, ಗಣಪತ್ ಜಗತಾಪ್, ಚಂದ್ರಕಾಂತ್ ಮಾರ್ನೆ ಮತ್ತು ರಘುನಾಥ್ ಅವದ್ ಆರೋಪಿಗಳು. ಇದರಲ್ಲಿ ಮಾಂಡೆಕರ್ ಅವರು ಆಡಳಿತರೂಢ ಎನ್‌ಸಿಪಿಯ ಶಾಸಕ ಶಂಕರ್ ಮಾಂಡೇಕರ್ ಅವರ ಸಹೋದರ.
ಕಲಾ ಕೇಂದ್ರದಲ್ಲಿ ನೃತ್ಯ ನಡೆಯುತ್ತಿರುವಾಗ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ‘ಮೂವರು ಆರೋಪಿಗಳನ್ನು ಬಂಧಿಸುವುದರ ಜೊತೆಗೆ, ಬಂದೂಕು ಮತ್ತು ವಾಹನವೊಂದನ್ನು ಕೂಡಾ ವಶಕ್ಕೆ ಪಡೆದಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.