ADVERTISEMENT

ಕರ್ನಾಟಕ ಸೇರಿ 11 ರಾಜ್ಯಗಳ ಸಿ.ಎಸ್‌ಗಳಿಗೆ ಎನ್‌ಸಿಪಿಸಿಆರ್‌ ಸಮನ್ಸ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 23:23 IST
Last Updated 4 ಜನವರಿ 2024, 23:23 IST
   

ನವದೆಹಲಿ: ಮದರಸಾಗಳಲ್ಲಿರುವ ಮುಸ್ಲಿಂಯೇತರ ವಿದ್ಯಾರ್ಥಿಗಳನ್ನು ಗುರುತಿಸಬೇಕು ಎಂಬ ನಿರ್ದೇಶನ ಕುರಿತು ಕ್ರಮ ಜರುಗಿಸದ 11 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಸಮನ್ಸ್ ನೀಡಿದೆ. 

ಹರಿಯಾಣ, ಗೋವಾ, ಮಧ್ಯಪ್ರದೇಶ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಛತ್ತೀಸಗಢ, ಜಾರ್ಖಂಡ್‌ ಸೇರಿದಂತೆ ಒಟ್ಟು 11 ರಾಜ್ಯಗಳ ಸಿಎಸ್‌ಗಳಿಗೆ ಸೂಚನೆ ನೀಡಲಾಗಿದೆ. ಜನವರಿ 17ರಂದು ಹಾಜರಾಗುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಲಾಗಿದೆ. 

ಸರ್ಕಾರ ನೆರವು ನೀಡುತ್ತಿರುವ ಮದರಸಾಗಳಲ್ಲಿ ಕಲಿಯುತ್ತಿರುವ ಮುಸ್ಲಿಂಯೇತರ ವಿದ್ಯಾರ್ಥಿಗಳನ್ನು ಗುರುತಿಸಬೇಕು. ವ್ಯಕ್ತಿಗತವಾಗಿ ಪರಿಶೀಲನೆ ನಡೆಸಿ ಅಂತಹ ಮಕ್ಕಳನ್ನು ಶಾಲೆಗೆ ಸೇರಿಸಲು ಕ್ರಮವಹಿಸಬೇಕು ಎಂದು ಆಯೋಗವು ಈ ಹಿಂದೆ ಆದೇಶಿಸಿತ್ತು. 

ADVERTISEMENT

ಈ ಬಗ್ಗೆ ಮೊದಲು 2022ರ ಡಿ. 8ರಂದು, ನಂತರ 2023ರ ಜ. 20 ಹಾಗೂ ಅ.17ರಂದು ಸೂಚನೆ ನೀಡಲಾಗಿತ್ತು. ನಿಗದಿತ ಸಮಯ ಕಳೆದಿರುವ ಕಾರಣ, ಕಾಯ್ದೆಯಡಿ ದತ್ತವಾಗಿರುವ ಅಧಿಕಾರವನ್ನು ಬಳಸಿ ವ್ಯಕ್ತಿಗತವಾಗಿ ಹಾಜರಾಗಿ ವಿವರಣೆ ನೀಡುವಂತೆ ಈಗ ಸೂಚಿಸಲಾಗಿದೆ. ಹಾಜರಾಗದಿದ್ದಲ್ಲಿ ನಿಯಮಾನುಸಾರ ಪರಿಣಾಮ ಎದುರಿಸಬೇಕಾದಿತು ಎಂದು ಸಮನ್ಸ್‌ನಲ್ಲಿ ಎಚ್ಚರಿಸಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.