ADVERTISEMENT

ಚುನಾವಣೆಯಲ್ಲಿ ಸೋಲಿಸಲು ಎನ್‌ಡಿಎಯಿಂದ ₹40,000 ಕೋಟಿ ವೆಚ್ಚ: ತೇಜಸ್ವಿ ಯಾದವ್‌

ಪಿಟಿಐ
Published 5 ಫೆಬ್ರುವರಿ 2026, 13:47 IST
Last Updated 5 ಫೆಬ್ರುವರಿ 2026, 13:47 IST
..
..   

ಪಟ್ನಾ: ‘2025ರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟ ಸೋಲಿಸಲು ಬಿಹಾರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ₹40,000 ಕೋಟಿ ಖರ್ಚು ಮಾಡಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ಕಾರ್ಯಾಧ್ಯಕ್ಷ ತೇಜಸ್ವಿ ಯಾದವ್‌ ಅವರು ಗುರುವಾರ ಆರೋಪಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ವಿರೋಧ ಯಾದವ್‌ ಅವರು, ಚುನಾವಣೆಗೆ ಮುನ್ನ ನಿತೀಶ್‌ ಕುಮಾರ್‌ ಅವರ ಸರ್ಕಾರ ನೀಡಿದ್ದ ಚುನಾವಣಾ ಜಾಹೀರಾತುಗಳ ಕುರಿತು ಪರೋಕ್ಷವಾಗಿ ಉಲ್ಲೇಖಿಸಿದರು.

‘ಜನಾಭಿಪ್ರಾಯಕ್ಕೆ ಸೋಲುಣಿಸಿ, ಆಡಳಿತ ಯಂತ್ರ ಬಳಸಿ ನೀವು (ಜೆಡಿಯು) ಗೆಲುವು ಸಾಧಿಸಿದ್ದೀರಿ. ಭಯ ಮತ್ತು ಬೆದರಿಕೆಯ ತಂತ್ರದಿಂದ ಪ್ರಜಾತಂತ್ರವನ್ನೇ ಹಾಳು ಮಾಡಿದ್ದೀರಿ. ನಮ್ಮನ್ನು ಸೋಲಿಸಲು ನೀವು ₹40,000 ಕೋಟಿ ಖರ್ಚು ಮಾಡಿದ್ದೀರಿ. ಈಗ ಸಮಯ ನಿಮ್ಮ ಕಡೆ ಇರಬಹುದು. ಮುಂದೆ ನಮಗೂ ಸಮಯ ಬರುತ್ತದೆ’ ಎಂದು ತೇಜಸ್ವಿ ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.