ADVERTISEMENT

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ 400 ಸ್ಥಾನ: ರಾಮದಾಸ್‌

ಪಿಟಿಐ
Published 13 ಫೆಬ್ರುವರಿ 2025, 13:21 IST
Last Updated 13 ಫೆಬ್ರುವರಿ 2025, 13:21 IST
ಕೇಂದ್ರ ಸಚಿವ ರಾಮದಾಸ್‌ ಅಠವಳೆ
ಕೇಂದ್ರ ಸಚಿವ ರಾಮದಾಸ್‌ ಅಠವಳೆ    

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಕೇಂದ್ರ ಸಚಿವ ರಾಮದಾಸ್‌ ಅಠವಳೆ ಗುರುವಾರ ಹೇಳಿದರು. 

ರಾಜ್ಯಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಮಾಜಿಕ ನ್ಯಾಯ ಮಾತ್ರವಲ್ಲದೇ ಆರ್ಥಿಕ ನ್ಯಾಯಕ್ಕೂ ಈ ಸಾಲಿನ ಬಜೆಟ್‌ ಒತ್ತು ನೀಡಿದೆ ಎಂದರು.

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸಂಖ್ಯೆ ಕಡಿಮೆಯಾಗಿರಬಹುದು, ಆದರೆ ಮುಂಬರುವ ಚುನಾವಣೆಯಲ್ಲಿ 400 ಸ್ಥಾನಗಳನ್ನು ಪಡೆಯಲಿದ್ದು ವಿರೋಧ ಪಕ್ಷಗಳ ಸ್ಥಾನಗಳು ಮತ್ತಷ್ಟು ಕುಸಿಯಲಿವೆ ಎಂದರು. 

ADVERTISEMENT

ಎಲ್ಲಾ ಸಚಿವಾಲಯಗಳಿಗೂ ಬಜೆಟ್‌ನಲ್ಲಿ ಗಣನೀಯ ಪ್ರಮಾಣದಲ್ಲಿ ಹಣವನ್ನು ಹಂಚಿಕೆ ಮಾಡಲಾಗಿದೆ ಎಂದರು. 

ತಮ್ಮ ಪಕ್ಷವು (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) ಸಂಸತ್ತಿನಲ್ಲಿ ಯಾವುದೇ ಚುನಾಯಿತ ಸದಸ್ಯರನ್ನು ಹೊಂದಿರದಿದ್ದರೂ ತಮಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸ್ಥಾನ ನೀಡಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.