ಬಂಧನ ( ಸಾಂಕೇತಿಕ ಚಿತ್ರ)
ಗುವಾಹಟಿ: ಕಳೆದ ವರ್ಷ ರಾಜ್ಯದಲ್ಲಿ ಸುಮಾರು 700 ಮಾನವ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. 174 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ.
2025–26ನೇ ಸಾಲಿನ ಬಜೆಟ್ ಮಂಡಿಸಿದ ರಾಜ್ಯ ಹಣಕಾಸು ಸಚಿವೆ ಅಜಂತಾ ನಿಯೋಗ್, ‘ಮಾದಕವಸ್ತು ಕಳ್ಳಸಾಗಣೆ ವಿರುದ್ಧ ರಾಜ್ಯದ ಹೋರಾಟವು ಗಮನಾರ್ಹ ಫಲಿತಾಂಶ ನೀಡಿದೆ. ಕಳೆದ ವರ್ಷ (2024) 174 ಕೆ.ಜಿ ಹೆರಾಯಿನ್ ಮತ್ತು 21,000 ಕೆ.ಜಿಗೂ ಹೆಚ್ಚು ಗಾಂಜಾವನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಸಂಘಟಿತ ಅಪರಾಧ ಜಾಲಗಳಿಗೆ ದೊಡ್ಡ ಹೊಡೆತವಾಗಿದೆ’ ಎಂದು ಹೇಳಿದ್ದಾರೆ.
ಅದೇ ರೀತಿ ಮಾನವ ಕಳ್ಳಸಾಗಣೆಯನ್ನು ಎದುರಿಸುವ ಪ್ರಯತ್ನಗಳು ತೀವ್ರಗೊಂಡಿವೆ. ಈ ಸಂಬಂಧ ಅಸ್ಸಾಂ ಪೊಲೀಸರು 450ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, 690ಕ್ಕೂ ಹೆಚ್ಚು ಮಾನವ ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ. ಸುಮಾರು 900 ಸಂತ್ರಸ್ತರನ್ನು ರಕ್ಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.