ಲಖನೌ (ಪಿಟಿಐ):ಹುಕ್ಕಾ ಬಾರ್ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಜಾಲ ಗುರಿಯಾಗಿಸಿ ಉತ್ತರಪ್ರದೇಶ ಪೊಲೀಸರು ರಾಜ್ಯದಾದ್ಯಂತ ಏಕ ಕಾಲಕ್ಕೆ ದಾಳಿ ನಡೆಸಿ,ಸುಮಾರು 800 ಜನರನ್ನು ಬಂಧಿಸಿದ್ದಾರೆ. ಅಲ್ಲದೇ ₹5.58 ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಆಗ್ರಾ, ಬರೇಲಿ, ಗೋರಖ್‌ಪುರ, ಬಸ್ತಿ, ಸಂತ ಕಬೀರನಗರ, ಸಿದ್ಧಾರ್ಥನಗರ, ರಾಯ್‌ಬರೇಲಿ, ಉನ್ನಾವ್, ಅಯೋಧ್ಯೆ, ಬಾರಾಬಂಕಿ, ಮೀರಠ್, ಗಾಜಿಯಾಬಾದ್, ಸಹರಾನ್‌ಪುರ, ಗಾಜಿಪುರ, ಪ್ರಯಾಗ್‌ರಾಜ್, ಲಖನೌ, ಕಾನ್ಪುರ, ವಾರಾಣಸಿ, ಗೌತಮಬುದ್ಧ ನಗರ ಸೇರಿರಾಜ್ಯದ 4,338 ಸ್ಥಳಗಳಲ್ಲಿ ಭಾನುವಾರ ಕಾರ್ಯಾಚರಣೆ ನಡೆಸಲಾಯಿತು. 22 ಜಿಲ್ಲೆಗಳಲ್ಲಿ 342 ಹುಕ್ಕಾ ಬಾರ್‌ಗಳ ಮೇಲೂ ದಾಳಿ ನಡೆಸಲಾಯಿತು. 702 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.