ADVERTISEMENT

ಬಿಜೆಪಿ ವಿರುದ್ಧ ಕಾರ್ಯಸಾಧುವಾಗುವಂಥ ಪರ್ಯಾಯ ಬೇಕಿದೆ: ಶರದ್ ಪವಾರ್

ರಾಹುಲ್‌ ವಿರುದ್ಧ_ಟೀಕೆ

ಏಜೆನ್ಸೀಸ್
Published 19 ಡಿಸೆಂಬರ್ 2019, 3:08 IST
Last Updated 19 ಡಿಸೆಂಬರ್ 2019, 3:08 IST
   

ನಾಗಪುರ: ಆಡಳಿತಾರೂಢ ಬಿಜೆಪಿಗೆ ಪರ್ಯಾಯವೊಂದು ಬೇಕಾಗಿದೆ. ಅದು ನಮ್ಮ ದೇಶದಲ್ಲಿಯೇ ನಿಲ್ಲುವಂಥ ಮತ್ತು ಕಾರ್ಯಸಾಧುವಾಗುವಂಥ ವ್ಯವಸ್ಥೆ ಆಗಿರಬೇಕು ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದರು.

‘ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಮೈತ್ರಿಕೂಟ ರಚಿಸುವ ಪ್ರಯತ್ನಗಳು ನಡೆಯುತ್ತಿವೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶದ ಕೆಲ ಭಾಗಗಳಲ್ಲಿ ಬಿಜೆಪಿ ವಿರೋಧಿ ಭಾವನೆ ಹೆಚ್ಚಾಗುತ್ತಿದೆ. ಇಂಥ ಬದಲಾವಣೆಗಳನ್ನು ಗುರುತಿಸಿ, ಪರ್ಯಾಯದ ಭರವಸೆ ಮೂಡಿಸುವವರಿಗಾಗಿ ಜನರು ನಿರೀಕ್ಷಿಸುತ್ತಿದ್ದಾರೆ. ಅಂಥ ಪರ್ಯಾಯ ಈ ದೇಶದಲ್ಲಿ ನಿಲ್ಲುವಂತಿರಬೇಕು’ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಪ್ರಸ್ತಾಪಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವಾಗ, ರಾಹುಲ್ಗಾಂಧಿ ದಕ್ಷಿಣ ಕೋರಿಯಾಗೆ ಭೇಟಿ ನೀಡಿ, ಅಲ್ಲಿನ ಪ್ರಧಾನಿ ಲೀ ನಾಕ್‌ಯಾನ್ ಅವರನ್ನು ಭೇಟಿಯಾಗಿದ್ದರು.

ADVERTISEMENT

ಪೌರತ್ವ ಕಾಯ್ದೆ ವಿರೋಧಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾದ ಕುರಿತು ಪ್ರಸ್ತಾಪಿಸಿದ ಅವರು, ‘ಕೆಲ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ದೇಶದಬಿಜೆಪಿಯೇತರ ಪಕ್ಷಗಳು ಒಗ್ಗೂಡುತ್ತಿವೆ ಎನಿಸುತ್ತದೆ’ ಎಂದರು.

ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಎದುರಿಸಲು ಸಂಘಟಿತ ಪ್ರಯತ್ನ ನಡೆಯಬೇಕಿದೆ. ಅದಕ್ಕೆ ಇನ್ನಷ್ಟು ಸಮಯ ಬೇಕಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ನಿರೀಕ್ಷಿತ. ಆದರೆ ಈ ಪ್ರತಿಭಟನೆ ಕೆಲವೇ ರಾಜ್ಯಗಳಿಗೆ ಸೀಮಿತವಾಗಬಹುದು.ಕೆಲ ರಾಜ್ಯಗಳಲ್ಲಿ ಈ ಕಾಯ್ದೆಗೆ ಸ್ವಾಗತ ಸಿಕ್ಕಿರುವುದು ಬಿಜೆಪಿಗೂ ಆಶ್ಚರ್ಯ ಉಂಟು ಮಾಡಿರಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.