ADVERTISEMENT

‘ಒಬಿಸಿ ಕೆನೆಪದರ: ತುರ್ತ ಪರಿಷ್ಕರಣೆ ಅಗತ್ಯವಿದೆ’: ಸಂಸದೀಯ ಸಮಿತಿ

2017ರ ನಂತರ ಆದಾಯ ಮಿತಿ ಹೆಚ್ಚಿಸಿಲ್ಲ: ಸಂಸದೀಯ ಸಮಿತಿ

ಪಿಟಿಐ
Published 8 ಆಗಸ್ಟ್ 2025, 16:33 IST
Last Updated 8 ಆಗಸ್ಟ್ 2025, 16:33 IST
<div class="paragraphs"><p>ಲೋಕಸಭೆ</p></div>

ಲೋಕಸಭೆ

   

– ಪಿಟಿಐ

ನವದೆಹಲಿ (ಪಿಟಿಐ): ಇತರ ಹಿಂದುಳಿದ ವರ್ಗಗಳ (ಒಬಿಸಿ) ‘ಕೆನೆಪದರ’ ಆದಾಯ ಮಿತಿಯನ್ನು ತುರ್ತಾಗಿ ಪರಿಷ್ಕರಿಸಬೇಕಿದೆ ಎಂದು ಸಂಸದೀಯ ಸಮಿತಿ ತಿಳಿಸಿದೆ.

ADVERTISEMENT

ಬಿಜೆಪಿ ಸಂಸದ ಗಣೇಶ್‌ ಸಿಂಗ್‌ ಅಧ್ಯಕ್ಷತೆಯ ಸಂಸದೀಯ ಸಮಿತಿಯು ಶುಕ್ರವಾರ ಎಂಟನೇ ವರದಿಯನ್ನು ಸಂಸತ್ತಿಗೆ ಸಲ್ಲಿಸಿದ್ದು, ‘2017ರಲ್ಲಿ ಕೆನೆಪದರ ಆದಾಯ ಮಿತಿಯನ್ನು ವಾರ್ಷಿಕ ₹6.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ನಂತರ ಈ ಮಿತಿಯನ್ನು ಏರಿಸಿಲ್ಲ’ ಎಂದು ಹೇಳಿದೆ.

‘ಈಗಿರುವ ಮಿತಿಯಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಅರ್ಹ ಒಬಿಸಿ ಕುಟುಂಬದವರು ಮೀಸಲಾತಿ ಮತ್ತು ಸರ್ಕಾರ ಕಲ್ಯಾಣ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಅದು ತಿಳಿಸಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ನಿಯಮಗಳ ಪ್ರಕಾರ, ‘ಕೆನೆಪದರದ ಮಿತಿಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಅಥವಾ ಅಗತ್ಯವಿದ್ದರೆ ಅದಕ್ಕೂ ಮುನ್ನ ಪರಿಷ್ಕರಿಸಬಹುದು’ ಎಂದೂ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

‘ಈಗಿರುವ ಕೆನೆಪದರದ ಮಿತಿ ಕಡಿಮೆಯಾಗಿದ್ದು, ಒಬಿಸಿಯ ಕೆಲವೇ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಹಣದುಬ್ಬರ ಮತ್ತು  ಆದಾಯದಲ್ಲಿನ ಏರಿಕೆಯನ್ನು ಗಣನೆಗೆ ತೆಗೆದುಕೊಂಡು ತುರ್ತಾಗಿ ಕೆನೆಪದರದ ಮಿತಿಯನ್ನು ಪರಿಷ್ಕರಿಸುವ ಅಗತ್ಯವಿದೆ’ ಎಂದು ಅದು ಪ್ರತಿಪಾದಿಸಿದೆ.

‘ಮೂರು ವರ್ಷಗಳು ಅಥವಾ ಅದಕ್ಕೂ ಮುನ್ನವೇ ಈ ಮಿತಿಯನ್ನು ಪರಿಷ್ಕರಿಸಲು ನಿಯಮದಲ್ಲಿ ಅವಕಾಶವಿದ್ದರೂ 2017ರ ಬಳಿಕ ಪರಿಷ್ಕರಣೆ ಆಗಿಲ್ಲ’ ಎಂದು ಅದು ವರದಿಯಲ್ಲಿ ಹೇಳಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.