ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್–ಯುಜಿ ಭೌತಿಕ ರೂಪದಲ್ಲೇ ಇರಲಿದೆ ಎಂದು ಗುರುವಾರ ಕೇಂದ್ರ ಸರ್ಕಾರ ಘೋಷಿಸಿದೆ.
ಈ ಹಿಂದೆ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ಮಾಡಬೇಕೆ ಅಥವಾ ಭೌತಿಕ ರೂಪದಲ್ಲೇ ಇರಬೇಕೆ ಎನ್ನುವುದನ್ನು ಶೀಘ್ರದಲ್ಲೇ ನಿರ್ಧಾರಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದರು.
ಈಗ ವಿಸ್ತೃತ ಚರ್ಚೆಯ ಬಳಿಕ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ನೀಟ್ ಯುಜಿ ಪರೀಕ್ಷೆಯನ್ನು ಭೌತಿಕ ರೂಪದಲ್ಲಿ ಅಂದರೆ ಒಎಮ್‌ಆರ್ ಶೀಟ್ ಭರ್ತಿ ಮಾಡುವ ಮೂಲಕ ಆಫ್‌ಲೈನ್‌ನಲ್ಲೇ ನಡೆಸಲು ನಿರ್ಧರಿಸಿದೆ. ಪರೀಕ್ಷೆಯು ಒಂದೇ ದಿನ ಪಾಳಿಯ ಪ್ರಕಾರ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ.
ನೀಟ್ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸುವ ಕುರಿತಾದ ಚರ್ಚೆ ಹೊಸದೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚಾಗಿರುವ ಕಾರಣ ಮತ್ತೆ ಮುನ್ನೆಲೆಗೆ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.