ADVERTISEMENT

ಭಾರತವನ್ನು ಸ್ವಾವಲಂಬಿಯಾಗಿಸುವ ನೆಹರೂ ಅವರ ದೃಷ್ಟಿಕೋನ ಇಂದು ಫಲಿಸಿದೆ: ಕಾಂಗ್ರೆಸ್

ಪಿಟಿಐ
Published 26 ಆಗಸ್ಟ್ 2023, 10:47 IST
Last Updated 26 ಆಗಸ್ಟ್ 2023, 10:47 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಮಾಜಿ ಪ್ರಧಾನಿ ಜವಹರ್‌ಲಾಲ್‌ ನೆಹರೂ ಅವರ ದೃಷ್ಟಿಕೋನ ಇಂದು ಉತ್ತಮ ಫಲಿತಾಂಶವನ್ನು ನೀಡಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಇಸ್ರೊದ ಮಹೋನ್ನತ ಸಾಧನೆಗಳ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಯಾಗುತ್ತಿದೆ. ಆದರೆ ಸತ್ಯಾಂಶ ಏನೆಂದರೆ ಪಾಕಿಸ್ತಾನದ ಬಾಹ್ಯಾಕಾಶ ಸಂಸ್ಥೆ SUPARCO ಅನ್ನು ಸ್ಥಾಪಿಸಿದ (1961) ಕೆಲವು ತಿಂಗಳ ಬಳಿಕವಷ್ಟೇ ಭಾರತದ ಬಾಹ್ಯಾಕಾಶ ಸಂಸ್ಥೆ INCOSPAR ಅಸ್ತಿತ್ವಕ್ಕೆ (1962 ಫೆಬ್ರುವರಿ) ಬಂದಿತ್ತು ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಅಮೆರಿಕ ಹಾಗೂ ಸೋವಿಯತ್ ಒಕ್ಕೂಟದ ಸಹಕಾರಕ್ಕಾಗಿ ಒತ್ತಡವಿದ್ದರೂ ಮೊದಲ ದಿನದಿಂದಲೂ ಸ್ವಾವಲಂಬನೆ ನೀತಿಯನ್ನು ನೆಹರೂ ಅವರು ಪ್ರತಿಪಾದಿಸಿದ್ದರು ಎಂದು ಅವರು ಉಲ್ಲೇಖಿಸಿದರು. ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಭಾರತೀಯ ವೃತ್ತಿಪರರು ವಿನ್ಯಾಸಗೊಳಿಸಬೇಕು, ನಿಯಂತ್ರಿಸಬೇಕು ಮತ್ತು ಕಾರ್ಯಗತಗೊಳಿಸಬೇಕು ಎಂಬ ಸ್ಪಷ್ಟ ನಿಲುವನ್ನು ನೆಹರೂ ಮತ್ತು ಇಂದಿರಾ ಗಾಂಧಿ ಹೊಂದಿದ್ದರು ಎಂದು ಅವರು ಹೇಳಿದ್ದಾರೆ.

ADVERTISEMENT

'ನೆಹರೂ ಅವರ ಯುಗದಲ್ಲಿ ಹಲವು ಕಟುವಾದ ಟೀಕೆಗಳ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಡಿಪಾಯ ಹಾಕಿ, ಹಲವು ಮೂಲಸೌಕರ್ಯಗಳನ್ನು ಒದಗಿಸಲಾಗಿತ್ತು. ಇಂದು ಸ್ವಾವಲಂಬಿ ಮತ್ತು ವೈಜ್ಞಾನಿಕವಾಗಿ ಮುಂದುವರಿದಿರುವ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ’ ಎಂದು ರಮೇಶ್‌ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.