ADVERTISEMENT

ನೇತಾಜಿ ಪ್ರತಿಮೆ ನಿರ್ಮಾಣಕ್ಕೆ ಕುಟುಂಬಸ್ಥರ ಆಗ್ರಹ

ಇಂಡಿಯಾ ಗೇಟ್‌ನಲ್ಲಿ ನಿರ್ಮಿಸಲು ಒತ್ತಾಯ

ಪಿಟಿಐ
Published 1 ನವೆಂಬರ್ 2018, 13:19 IST
Last Updated 1 ನವೆಂಬರ್ 2018, 13:19 IST
ನೇತಾಜಿ
ನೇತಾಜಿ   

ಕೋಲ್ಕತ್ತ: ‘ನವದೆಹಲಿಯ ಇಂಡಿಯಾ ಗೇಟ್‌ ಆವರಣದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು, ಜನವರಿ 23ರ ಅವರ ಹುಟ್ಟುಹಬ್ಬವನ್ನು ವಿಮೋಚನಾ ದಿನ ಎಂದು ಘೋಷಣೆ ಮಾಡಬೇಕು’ ಎಂದು ಅವರ ಕುಟುಂಬ ಸದಸ್ಯರೊಬ್ಬರು ಒತ್ತಾಯಿಸಿದ್ದಾರೆ.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 182 ಮೀಟರ್‌ ಪ್ರತಿಮೆಯನ್ನು ಪ್ರಧಾನಿ ನರೇಂದ್ರಮೋದಿ ಅನಾವರಣಗೊಳಿಸಿದ ಮರುದಿನವೇ ಇಂತಹ ಬೇಡಿಕೆ ಕೇಳಿಬಂದಿದೆ.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು, ಸರ್ದಾರ್‌ ಪ್ರತಿಮೆ ವಿಚಾರದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಇದೇ ರೀತಿ, ಮುಂದಿನ ವರ್ಷ ನೇತಾಜಿ ಜನ್ಮದಿನವನ್ನು ವಿಮೋಚನಾ ದಿನ ಎಂದು ಘೋಷಣೆ ಮಾಡುವುದರ ಜೊತೆಗೆ ಅವರ ಪ್ರತಿಮೆ ಸ್ಥಾಪನೆಗೆ ಮುಂದಾಗಬೇಕು’ ಎಂದು ಸೋದರನ ಮೊಮ್ಮಗ ಚಂದ್ರಕುಮಾರ್‌ ಭೋಸ್‌ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಇಂಡಿಯನ್‌ ನ್ಯಾಷನಲ್‌ ಆರ್ಮಿ (ಐಎನ್‌ಎ) ಹಿರಿಯ ಸೇನಾನಿಗಳ ಒತ್ತಾಸೆಯಂತೆ, ಪ್ರತಿಮೆ ನಿರ್ಮಾಣಕ್ಕೆ ಒತ್ತಾಯ ಮಾಡಿದ್ದೇನೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿರುವ ಬೋಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.