ADVERTISEMENT

ಎಐಎಡಿಎಂಕೆಯ ಉಚ್ಚಾಟಿತ ಮುಖಂಡರೊಡನೆ ಶಶಿಕಲಾ ದೂರವಾಣಿ ಸಂಭಾಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2021, 5:37 IST
Last Updated 16 ಜೂನ್ 2021, 5:37 IST
ಶಶಿಕಲಾ
ಶಶಿಕಲಾ    

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ದೀರ್ಘಕಾಲದ ಒಡನಾಡಿ ವಿ.ಕೆ. ಶಶಿಕಲಾ ಅವರು ಸಕ್ರಿಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಎಐಎಡಿಎಂಕೆ ಪಕ್ಷದ ಉಚ್ಚಾಟಿತ ಮುಖಂಡರ ಜೊತೆ ಶಶಿಕಲಾ ಅವರು ದೂರವಾಣಿಯಲ್ಲಿ ನಡೆಸಿದ ಸಂಭಾಷಣೆಯ ತುಣುಕು ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಎಐಎಡಿಎಂಕೆಯ 17 ಮುಖಂಡರು ಉಚ್ಚಾಟಣೆಗೊಂಡ ನಂತರ ಹೊರಬಿದ್ದಿರುವ ದೂರವಾಣಿ ಸಂಭಾಷಣೆಯಲ್ಲಿ, ಪಕ್ಷದ ಈಗಿನ ಸ್ಥಿತಿಗತಿಯ ಬಗ್ಗೆ ಶಶಿಕಲಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಜಯಲಲಿತಾ ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. 100 ವರ್ಷ ತುಂಬಿದರೂ ಎಐಎಡಿಎಂಕೆ ಬಲವಾಗಿರಬೇಕು. ಆ ಕಾರಣ, ನೀವು ನನ್ನೊಂದಿಗಿರಬೇಕು' ಎಂದು ಶಶಿಕಲಾ ಅವರು ಉಚ್ಛಾಟಿತ ನಾಯಕರಿಗೆ ತಿಳಿಸಿದ್ದಾರೆ.

ADVERTISEMENT

ಕೋವಿಡ್‌ ಸಾಂಕ್ರಾಮಿಕವು ಹತೋಟೆಗೆ ಬಂದ ನಂತರ ಉಚ್ಛಾಟಿತ ಮುಖಂಡರನ್ನು ಭೇಟಿಯಾಗುವುದಾಗಿ ಶಶಿಕಲಾ ಅವರು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.