ADVERTISEMENT

ರಾಜಾ ರಾಮ್‌ ಮೋಹನ್‌ ರಾಯ್‌ ಪುತ್ಥಳಿ ಅನಾವರಣ

ಪಿಟಿಐ
Published 22 ಮೇ 2022, 14:13 IST
Last Updated 22 ಮೇ 2022, 14:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ‌ (ಪಿಟಿಐ): ಸಮಾಜ ಸುಧಾರಕ, ಬಂಗಾಳದ ನವೋದಯ ಪಿತಾಮಹ ರಾಜಾರಾಮ್‌ ಮೋಹನ್‌ ರಾಯ್‌ ಅವರ 250ನೇ ಜನ್ಮದಿನದ ಅಂಗವಾಗಿ ಕೇಂದ್ರ ಸಾಂಸ್ಕೃತಿಕ ಸಚಿವ ಜಿ. ಕಿಶನ್‌ ರೆಡ್ಡಿ ಅವರು ಕೋಲ್ಕತ್ತದ ಉಪ್ಪಿನ ಸರೋವರದಲ್ಲಿ ಮೋಹನ್ ರಾಯ್‌ ಅವರ ಪುತ್ಥಳಿಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಅನಾವರಣಗೊಳಿಸಿದರು.

ಕೋಲ್ಕತ್ತದ ಸೈನ್ಸ್‌ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಸಚಿವ ರೆಡ್ಡಿ, ‘ರಾಜಾ ರಾಮ್‌ ಮೋಹನ್‌ ರಾಯ್‌ ಅವರು ಸತಿ ಅಥವಾ ಸತಿ ಸಹಗಮನದಂತಹ ಪದ್ಧತಿಯ ನಿವಾರಣೆಗೆ ಹೋರಾಡಿದ ವ್ಯಕ್ತಿ. ಅವರೊಬ್ಬ ಚಿಂತಕ, ಶಿಕ್ಷಣತಜ್ಞ, ಪತ್ರಕರ್ತ ಹಾಗೂ ದಾರ್ಶನಿಕರಾಗದ್ದರು. ಅವರು ಕೇವಲ ಬಂಗಾಳಕ್ಕಲ್ಲ; ಇಡೀ ದೇಶಕ್ಕೇ ಹೆಮ್ಮೆ. ಅವರ ಪುತ್ಥಳಿಯ ಸ್ಥಾಪನೆ ಯುವಜನತೆಗೆ ಸ್ಫೂರ್ತಿ ನೀಡುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT