ADVERTISEMENT

ಹೊಸ ಸ್ವರೂಪದ ಕೊರೊನಾ: ಭಾರತ–ಬ್ರಿಟನ್‌ ವಿಮಾನ ಹಾರಾಟ ನಿರ್ಬಂಧ ವಿಸ್ತರಣೆ ಸಾಧ್ಯತೆ

ಪಿಟಿಐ
Published 29 ಡಿಸೆಂಬರ್ 2020, 17:12 IST
Last Updated 29 ಡಿಸೆಂಬರ್ 2020, 17:12 IST
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು–ಸಾಂದರ್ಭಿಕ ಚಿತ್ರ
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು–ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ ಮತ್ತು ಬ್ರಿಟನ್‌ ನಡುವಿನ ನಾಗರಿಕ ವಿಮಾನಗಳ ಹಾರಾಟ ನಿಷೇಧ ಅವಧಿ ವಿಸ್ತರಿಸುವ ಸೂಚನೆಯನ್ನು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಮಂಗಳವಾರ ನೀಡಿದ್ದಾರೆ.

ಕೊರೊನಾ ವೈರಾಣುವಿನ ಹೊಸ ಸ್ವರೂಪವು ಬ್ರಿಟನ್‌ನಲ್ಲಿ ಪತ್ತೆಯಾದ ಬೆನ್ನಲ್ಲೇ ಡಿಸೆಂಬರ್‌ 23ರಿಂದ ಕೇಂದ್ರ ಸರ್ಕಾರವು ಬ್ರಿಟನ್‌ಗೆ ತೆರಳುವ ಮತ್ತು ಅಲ್ಲಿಂದ ಭಾರತಕ್ಕೆ ಬರುವ ವಿಮಾನಗಳ ಹಾರಾಟವನ್ನು ಡಿಸೆಂಬರ್‌ 31ರ ವರೆಗೂ ರದ್ದುಪಡಿಸಿ ಆದೇಶಿಸಿತ್ತು. ಇದೀಗ ವಿಮಾನ ಹಾರಾಟ ತಾತ್ಕಾಲಿಕ ನಿಷೇಧ ಅವಧಿಯನ್ನು ಮತ್ತಷ್ಟು ದಿನಗಳವರೆಗೂ ವಿಸ್ತರಿಸುವ ಮುನ್ಸೂಚನೆ ನೀಡಲಾಗಿದೆ.

'ಭಾರತ ಮತ್ತು ಬ್ರಿಟನ್‌ ನಡುವಿನ ವಿಮಾನಗಳ ಹಾರಾಟದ ತಾತ್ಕಾಲಿಕ ನಿಷೇಧ ವಿಸ್ತರಣೆಯಾಗಬಹುದು, ನಿರ್ಬಂಧ ಸಡಿಲಗೊಳಿಸುವುದು ಹಾಗೂ ಕೈಗೊಳ್ಳಬೇಕಾದ ಇತರೆ ಕ್ರಮಗಳ ಕುರಿತು ತಿಳಿಯಲಿದ್ದೇವೆ' ಎಂದು ಸಚಿವ ಹರ್ದೀಪ್‌ ಸಿಂಗ್‌ ಹೇಳಿದ್ದಾರೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.