ಹೊಸ ವರ್ಷಾಚರಣೆ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ಅನೇಕ ಯುವಕ–ಯುವತಿಯರು ಕುಡಿದು ತೂರಾಡುವುದಲ್ಲದೇ ವಾಹನ ಚಲಾಯಿಸಿ ಎಡವಟ್ಟು ಮಾಡಿಕೊಳ್ಳುವುದು ಸಾಮಾನ್ಯ.
ಇದಕ್ಕೆ ಪರಿಹಾರವಾಗಿ ಉತ್ತರ ಪ್ರದೇಶದ ನೋಯ್ದಾ ಸಿಟಿ ಪೊಲೀಸರು ಹೊಸ ವರ್ಷಾಚರಣೆ ಪ್ರಯುಕ್ತ ಬಾರ್, ಪಬ್‌ಗಳಲ್ಲಿ ಕುಡಿದು ಮನೆಗೆ ಹೋಗಬೇಕು ಎನ್ನವರಿಗೆ ಕ್ಯಾಬ್ ವ್ಯವಸ್ಥೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಡ್ರಿಂಕ್ ಆ್ಯಂಡ್ ಡ್ರೈವ್ ಅನಾಹುತಗಳನ್ನು ತಡೆಗಟ್ಟಲು ಪೊಲೀಸರು ಈ ಕ್ರಮ ವಹಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದಕ್ಕಾಗಿ ಈಗಾಗಲೇ ಸಿಟಿಯಲ್ಲಿನ ಅನೇಕ ಕ್ಯಾಬ್‌ಗಳನ್ನು ಮೀಸಲು ಇಡಲಾಗಿದ್ದು, ಬಾರ್, ಪಬ್‌ಗಳ ಸಹಕಾರದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ವಹಿಸಲಾಗಿದೆ ಎಂದು ಡಿಸಿಪಿ ರಾಮ್ ಬದನ್ ಸಿಂಗ್ ಅವರು ತಿಳಿಸಿದ್ದಾರೆ.
ನೋಯ್ಡಾ ಉತ್ತರ ಪ್ರದೇಶದ ಕಾಸ್ಮೊಪಾಲಿಟಿನ್ ನಗರವಾಗಿದ್ದು ಆಧುನಿಕ ಸಂಸ್ಕೃತಿ, ನೈಟ್ ಲೈಪ್‌ಗೆ ಹೆಸರಾಗಿದೆ.
ಹೊಸ ವರ್ಷಾಚರಣೆಗೆ ನಗರದಲ್ಲಿ 3,000 ಪೊಲೀಸರನ್ನು ನಿಯೋಜಿಸಲಾಗಿದ್ದು ನಾಲ್ಕು ಸಾವಿರಕ್ಕೂ ಅಧಿಕ ಸಿಸಿಟಿವಿ, ಬಾಂಬ್ ಪತ್ತೆ ದಳ, ಶ್ವಾನ ದಳಗಳನ್ನು ನಿಯೋಜಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.