ನ್ಯೂಯಾರ್ಕ್: ಪಾಕಿಸ್ತಾನ ಮೂಲದಲಷ್ಕರ್ ಎ ತಯಬಾ (ಎಲ್‌ಇಟಿ) ಸಂಘಟನೆಗೆ ಸೇರಲು ಪ್ರಯತ್ನಿಸುತ್ತಿದ್ದ ನ್ಯೂಯಾರ್ಕ್‌ನ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ 15 ವರ್ಷಗಳ ಸೆರೆವಾಸ ಮತ್ತು ಉಗ್ರಸಂಘಟನೆಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸುವ ಮೂಲಕ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದ್ದ ಕಾರಣಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಜೀಸಸ್ ವಿಲ್ಫ್ರೆಡೋ ಎನ್‌ಕಾರ್ನೇಶಿಯನ್ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನಿಗೆ ‘ಜಿಹಾದಿ ಸೋಲ್ಡ್ಜರ್’, ‘ಜಿಹಾದಿನ್‌ಹಿಯರ್’, ‘ಜಿಹಾದಿನ್‌ಹಾರ್ಟ್’ ಸೇರಿದಂತೆ ಹಲವು ಹೆಸರುಗಳು ಇವೆ.
2008ರ ನವೆಂಬರ್‌ನಲ್ಲಿ ನಡೆದಿದ್ದ ಮುಂಬೈ ದಾಳಿ ಸೇರಿದಂತೆ ಹಲವು ಉಗ್ರ ಕೃತ್ಯಗಳಿಗೆ ಈತ ನೆರವಾಗಿದ್ದ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.