ADVERTISEMENT

ವಾಯು ಮಾಲಿನ್ಯ: ರೈಲ್ವೆಗೆ ₹ 91.2 ಲಕ್ಷ ದಂಡ

ಪಿಟಿಐ
Published 16 ಜುಲೈ 2020, 21:25 IST
Last Updated 16 ಜುಲೈ 2020, 21:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲೆಯಲ್ಲಿ ಸರಕು ಸಾಗಣೆ ಪ್ರಕ್ರಿಯೆ ವೇಳೆ ವಾಯುಮಾಲಿನ್ಯಕ್ಕೆ ಕಾರಣವಾದ ಆರೋಪಕ್ಕಾಗಿ ರೈಲ್ವೆ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ₹91.2 ಲಕ್ಷ ದಂಡ ವಿಧಿಸಿದೆ.

ರೈಲ್ವೆ ಸೈಡಿಂಗ್‌ನಲ್ಲಿ ಸಿಮೆಂಟ್‌ನಂತಹ ಸರಕುಗಳನ್ನುತುಂಬುವಮತ್ತು ಇಳಿಸುವ ಸಂದರ್ಭದಲ್ಲಿ ಪರಿಸರ ಮಾಲಿನ್ಯವಾಗಿದೆ ಎಂದು ಎನ್‌ಜಿಟಿ ತಿಳಿಸಿದೆ.ಎರಡು ತಿಂಗಳಲ್ಲಿ ಈ ಮೊತ್ತವನ್ನು ಠೇವಣಿ ಇಡಬೇಕು.ಇಲ್ಲದಿದ್ದಲ್ಲಿ ಕಠಿಣಕ್ರಮ ತೆಗೆದುಕೊಳ್ಳಬೇಕಾದಿತು ಎಂದು ಎನ್‌ಜಿಟಿ ಎಚ್ಚರಿಸಿದೆ.

ರೈಲ್ವೆಯ ಅಸಮರ್ಪಕ ಕ್ರಮದಿಂದಾಗಿ ವಾಯುಮಾಲಿನ್ಯ ಹೆಚ್ಚುತ್ತಿದೆ ಎಂದು ಉತ್ತರ ಪ್ರದೇಶ ನಿವಾಸಿ ಶಿವಾಂಶ್‌ಪಾಂಡೆ ಎಂಬುವರು ಅರ್ಜಿ ಸಲ್ಲಿಸಿದ್ದರು.‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಕುರಿತು ನೀಡಿರುವ ವರದಿಯನ್ನು ಆಧರಿಸಿ, ರೈಲ್ವೆ ಸಚಿವಾಲಯ ಮುಂದಿನ ಕ್ರಮ ತೆಗೆದುಕೊಳ್ಳಲಿ’ ಎಂದು ನ್ಯಾಯಮೂರ್ತಿ ಎ.ಕೆ. ಗೋಯೆಲ್‌ ನೇತೃತ್ವದ ಪೀಠ ತಿಳಿಸಿದೆ.

ADVERTISEMENT

ಸಿಮೆಂಟ್‌, ರಸಗೊಬ್ಬರ, ಧಾನ್ಯ ಮತ್ತು ಇತರೆ ಸರಕುಗಳನ್ನು ಲೋಡ್‌ ಮತ್ತು ಅನ್‌ಲೋಡ್‌ ಮಾಡುವಾಗ ವಾಯುಮಾಲಿನ್ಯವಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ರೈಲ್ವೆ ಇಲಾಖೆಯು ಕೈಗೊಂಡಿರುವ ಕ್ರಮ ತಾಂತ್ರಿಕವಾಗಿ ಸಮರ್ಪಕವಾಗಿಲ್ಲ. ಹಾಗಾಗಿ, ವಾಯುಮಾಲಿನ್ಯ ಹೆಚ್ಚುತ್ತಲೇ ಇದೆ’ ಎಂದುಉತ್ತರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.