ADVERTISEMENT

ಮಾನವ ಹಕ್ಕುಗಳ ಮೇಲೆ ಕೋವಿಡ್ -19 ಪ್ರಭಾವ: ಅವಲೋಕನಕ್ಕೆ ಸಮಿತಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 15:11 IST
Last Updated 5 ಜುಲೈ 2020, 15:11 IST
ವೈರಸ್‌
ವೈರಸ್‌   

ನವದೆಹಲಿ: ಮಾನವ ಹಕ್ಕುಗಳ ಮೇಲೆ ಕೋವಿಡ್ -19 ಪ್ರಭಾವದ ಕುರಿತ ಅವಲೋಕನಕ್ಕಾಗಿರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಹನ್ನೊಂದು ಸದಸ್ಯರತಜ್ಞರ ಸಮಿತಿ ರಚಿಸಿದೆ.

ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಎಸ್.ರೆಡ್ಡಿ ಮತ್ತು ಹಕ್ಕುಗಳ ಕಾರ್ಯಕರ್ತ ಮಾಜಾ ದಾರುವಾಲಾ ಅವರು ಈ ಸಮಿತಿಯಲ್ಲಿದ್ದಾರೆ. ವಿಶೇಷವಾಗಿ ತಳ ಸಮುದಾಯದ ಹಾಗೂ ದುರ್ಬಲ ವರ್ಗದವರ ಮೇಲೆ ಲಾಕ್‌ಡೌನ್‌ನಿಂದಾದ ಪರಿಣಾಮಗಳ ಕುರಿತು ಸಮಿತಿ ಅಧ್ಯಯನ ನಡೆಸಲಿದೆ.

ದೇಶ ಅಥವಾ ವಿದೇಶದ ಯಾವುದೇ ಭಾಗದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ, ಲಾಕ್‌ಡೌನ್‌ ಪರಿಸ್ಥಿತಿ ನಿರ್ವಹಣೆಗೆ ತೆಗೆದುಕೊಂಡಿರುವ ಉತ್ತಮ ಕ್ರಮಗಳನ್ನು ಗಮನಿಸಲಿರುವ ಸಮಿತಿಯು, ಆಯೋಗಕ್ಕೆ ವರದಿಯನ್ನು ನೀಡಲಿದೆ.ಸಮಿತಿ ನೀಡುವ ಶಿಫಾರಸುಗಳನ್ನು ಆಧರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆಯೋಗವು ಸಲಹೆ ನೀಡಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.