ಬಂಧನ
(ಪ್ರಾತಿನಿಧಿಕ ಚಿತ್ರ)
ನವದೆಹಲಿ: ನಿಷೇಧಿತ ಉಗ್ರ ಸಂಘಟನೆ ಖಲಿಸ್ತಾನ ಲಿಬರೇಷನ್ ಫೋರ್ಸ್‌ನ (ಕೆಎಲ್‌ಎಫ್) ಉಗ್ರರ ಆಪ್ತ ಸಹಚರನಾಗಿದ್ದ ಭಗವಂತ್ ಸಿಂಗ್ ಅಲಿಯಾಸ್ ಮನ್ನ ಭಟ್ಟಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಮಾರ್ಚ್‌ನಲ್ಲಿ ಅಮೃತಸರದ ದೇಗುಲವೊಂದರ ಮೇಲೆ ನಡೆಸಿದ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಆತನನ್ನು ಬಂಧಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾದವರ ಸಂಖ್ಯೆ 4ಕ್ಕೆ ತಲುಪಿದೆ.
ಅಮೃತಸರದ ಠಾಕೂರ್ ದ್ವಾರ ಸನಾತನ ಮಂದಿರದ ಮೇಲೆ ಕೆಎಲ್‌ಎಫ್ ಉಗ್ರರಾದ ಗುರ್ಸಿದಾಕ್ ಸಿಂಗ್ ಹಾಗೂ ವಿಶಾಲ್ ಗ್ರೆನೇಡ್ ದಾಳಿ ನಡೆಸಿದ್ದರು. ಈ ಇಬ್ಬರಿಗೂ ಭಗವಂತ್ ಆಶ್ರಯ ನೀಡಿದ್ದನಲ್ಲದೇ, ದಾಳಿಯ ಪಿತೂರಿಯಲ್ಲೂ ಭಾಗಿಯಾಗಿದ್ದ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.