ADVERTISEMENT

ಹುರಿಯತ್ ಕಾನ್ಫರೆನ್ಸ್ ಕಚೇರಿ ಮುಟ್ಟುಗೋಲು ಹಾಕಿಕೊಂಡ ಎನ್ಐಎ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 10:57 IST
Last Updated 29 ಜನವರಿ 2023, 10:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯದ ಆದೇಶದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಾನುವಾರ ರಾಜ್‌ಬಾಗ್ ಪ್ರದೇಶದಲ್ಲಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸ್ಥೆಯ ತಂಡವು ಹುರಿಯತ್ ಕಚೇರಿಗೆ ಆಗಮಿಸಿ ಕಟ್ಟಡದ ಹೊರ ಗೋಡೆಗೆ ಮುಟ್ಟುಗೋಲು ನೋಟಿಸ್ ಅಂಟಿಸಿದೆ ಎಂದು ಹೇಳಿದರು.

‘ರಾಜ್‌ಬಾಗ್‌ನಲ್ಲಿ ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್‌ ಕಚೇರಿ ಇರುವ ಕಟ್ಟಡ ಪ್ರಸ್ತುತ ವಿಚಾರಣೆ ಎದುರಿಸುತ್ತಿರುವ ನಯೀಮ್ ಅಹ್ಮದ್ ಖಾನ್ ಅವರ ಜಂಟಿ ಮಾಲೀಕತ್ವದಲ್ಲಿದೆ ಎಂದು ಸಾರ್ವಜನಿಕರಿಗೆ ತಿಳಿಸುವುದು ಇದರ ಉದ್ದೇಶ. ನವದೆಹಲಿಯ ಪಟಿಯಾಲ ಹೌಸ್‌ ವಿಶೇಷ ಎನ್ಐಎ ನ್ಯಾಯಾಲಯ ಜ. 27 ರಂದು ನೀಡಿದ ಆದೇಶ ಲಗತ್ತಿಸಲಾಗಿದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ADVERTISEMENT

ಹುರಿಯತ್ ಕಾನ್ಫರೆನ್ಸ್ 26 ಪ್ರತ್ಯೇಕತಾವಾದಿ ಸಂಘಟನೆಗಳ ಒಕ್ಕೂಟವಾಗಿದ್ದು, 1993ರಲ್ಲಿ ರಚನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.