ADVERTISEMENT

ಜಮ್ಮುವಿನ ವಿವಿಧೆಡೆ ಎನ್‌ಐಎ ದಾಳಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 18:01 IST
Last Updated 10 ಫೆಬ್ರುವರಿ 2024, 18:01 IST
.
.   

ಜಮ್ಮು/ಶ್ರೀನಗರ (ಪಿಟಿಐ): ನಿಷೇಧಿತ ಜಮಾತ್‌–ಎ–ಇಸ್ಲಾಮಿ ಸಂಘಟನೆಗೆ ಸಂಬಂಧಿಸಿದ ಉಗ್ರ ಚಟುವಟಿಕೆಗೆ ಹಣಕಾಸು ನೆರವು ನೀಡಿದ ಪ್ರಕರಣದ ತನಿಖೆಯ ಭಾಗವಾಗಿ  ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶನಿವಾರ ಜಮ್ಮು ಮತ್ತು ಕಾಶ್ಮೀರದ 15 ಸ್ಥಳಗಳಲ್ಲಿ ಶೋಧ ನಡೆಸಿತು.

ಶ್ರೀನಗರ, ಜಮ್ಮು, ಬುದ್ಗಾಂ, ಕುಲ್ಗಾಂ ಮತ್ತು ಅನಂತ್‌ನಾಗ್‌ನಲ್ಲಿ ಶೋಧ ಕೈಗೊಂಡಿತ್ತು. ಉಗ್ರ ಸಂಘಟನೆ ಮತ್ತು ಅದರ ಟ್ರಸ್ಟ್‌ಗೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್‌ ಸಾಧನಗಳು ಹಾಗೂ ₹20 ಲಕ್ಷ ಮೊತ್ತವನ್ನು ವಶಕ್ಕೆ ಪಡೆದಿದೆ ಎಂದು ತನಿಖಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

 ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

 ಜಮಾತ್‌ನ ಮಾಜಿ ಮುಖ್ಯಸ್ಥ ಶೇಖ್‌ ಘುಲಾಮ್‌ ಹಸನ್‌ ಮತ್ತು ಇತರ ನಾಯಕರ ನಿವಾಸಗಳಲ್ಲೂ ಶೋಧ ನಡೆಸಲಾಯಿತು ಎಂದು ತಿಳಿಸಿದರು.

2019ರಲ್ಲಿ ಕೇಂದ್ರ ಸರ್ಕಾರವು, ಜಮಾತ್‌ ಉಗ್ರ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.