
ಪಿಟಿಐ
ಶ್ರೀನಗರ: ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಮುಖ್ಯಸ್ಥ ಮೊಹಮ್ಮದ್ ಯೂಸುಫ್ ಶಾ ಅಲಿಯಾಸ್ ಸೈಯದ್ ಸಲಾಹುದ್ದೀನ್ ‘ಯುಎಪಿಎ ಕಾಯ್ದೆ’ ಅಡಿ ‘ಘೋಷಿತ ಅಪರಾಧಿ’ ಎಂದು ಎನ್‌ಐಎ ನ್ಯಾಯಾಲಯ ಶುಕ್ರವಾರ ಹೇಳಿದೆ.
‘ಸಲಾಹುದ್ದೀನ್ ಬಂಧನಕ್ಕೆ ಸಂಬಂಧಿಸಿ ಹಲವು ಬಾರಿ ವಾರಂಟ್ ಹೊರಡಿಸಲಾಗಿದ್ದರೂ ಆತನ ಪತ್ತೆ ಸಾಧ್ಯವಾಗಿಲ್ಲ. ಆತ ತಲೆಮರೆಸಿಕೊಂಡಿರಬಹುದು ಇಲ್ಲವೇ ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಾನು ಅಡಗಿರುವ ಸ್ಥಳ ಕುರಿತು ಬಹಿರಂಗಪಡಿಸದಿರಬಹುದು’ ಎಂದು ಎನ್‌ಐಎ ವರದಿ ಸಲ್ಲಿಸಿತ್ತು.
ಈ ವರದಿ ಆಧಾರದಲ್ಲಿ ನ್ಯಾಯಾಲಯವು ಈ ಘೋಷಣೆ ಮಾಡಿದ್ದು, ಆಗಸ್ಟ್ 30ರ ಒಳಗಾಗಿ ಇಲ್ಲವೇ ಅದೇ ದಿನ ನ್ಯಾಯಾಲಯಕ್ಕೆ ಸಲಾಹುದ್ದೀನ್ ಹಾಜರಾಗಬೇಕು ಎಂದು ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.