ADVERTISEMENT

ಮೊಹಾಲಿ ದಾಳಿ ಪ್ರಕರಣದ ತನಿಖೆ: ಪಂಜಾಬ್‌ ಪೊಲೀಸ್ ಜತೆ ಸಂಪರ್ಕದಲ್ಲಿ ಎನ್‌ಐಎ

ಐಎಎನ್ಎಸ್
Published 10 ಮೇ 2022, 5:18 IST
Last Updated 10 ಮೇ 2022, 5:18 IST
ಪಂಜಾಬ್ ಗುಪ್ತಚರ ದಳದ ಪ್ರಧಾನ ಕಚೇರಿ ಎದುರು ಪೊಲೀಸ್ ಬಂದೋಬಸ್ತ್ – ಪಿಟಿಐ ಚಿತ್ರ
ಪಂಜಾಬ್ ಗುಪ್ತಚರ ದಳದ ಪ್ರಧಾನ ಕಚೇರಿ ಎದುರು ಪೊಲೀಸ್ ಬಂದೋಬಸ್ತ್ – ಪಿಟಿಐ ಚಿತ್ರ   

ನವದೆಹಲಿ: ಪಂಜಾಬ್ ಗುಪ್ತಚರ ದಳದ ಪ್ರಧಾನ ಕಚೇರಿ ಮೇಲೆ ನಡೆದ ದಾಳಿ ವಿಚಾರವಾಗಿ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ರಾಜ್ಯ ಪೊಲೀಸರೊಂದಿಗೆ ಸಂಪರ್ಕದಲ್ಲಿದೆ. ತನಿಖೆ ಆರಂಭಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.

ಎನ್‌ಐಎಯ ಭಯೋತ್ಪಾದನೆ ತನಿಖಾ ಘಟಕದ ತಂಡವೊಂದು ಪಂಜಾಬ್ ಪೊಲೀಸರ ಜತೆ ಸಂಪರ್ಕದಲ್ಲಿದೆ. ಪಂಜಾಬ್‌ನಲ್ಲಿ ಖಾಲಿಸ್ತಾನಿ ಗುಂಪುಗಳು ಹೆಚ್ಚುತ್ತಿವೆ ಎಂದು ಬಲವಾಗಿ ನಂಬಿರುವ ಎನ್‌ಐಎ, ಅದೇ ಗುಂಪುಗಳು ದಾಳಿ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ.

ಮೊಹಾಲಿಯ ಸೆಕ್ಟರ್ 77ರಲ್ಲಿರುವ ಗುಪ್ತಚರ ದಳದ ಪ್ರಧಾನ ಕಚೇರಿ ಮೇಲೆ ಸೋಮವಾರ ರಾತ್ರಿ 7.45ರ ಸುಮಾರಿಗೆ ಗ್ರೆನೇಡ್ ದಾಳಿ ನಡೆದಿತ್ತು. ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ದಾಳಿಗೂ ಮುನ್ನ ಗುಪ್ತಚರ ದಳದ ಪ್ರಧಾನ ಕಚೇರಿ ಹೊರಭಾಗದಲ್ಲಿ ಸ್ವಿಫ್ಟ್ ಡಿಜೈರ್ ಕಾರೊಂದು ಕಾಣಿಸಿತ್ತು ಎನ್ನಲಾಗಿದೆ.

ADVERTISEMENT

ಕೆಲ ದಿನಗಳ ಹಿಂದಷ್ಟೇ ನಾಲ್ವರು ಖಾಲಿಸ್ತಾನಿ ಉಗ್ರರನ್ನು ಹರಿಯಾಣ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.